ಹೊಸಪೇಟೆ : ನಾಳೆ ಕರ್ನಾಟಕ ಮಾದಾರ ಮಹಾಸಭಾ ಸಭೆ
ಹೊಸಪೇಟೆ, 21 ಮೇ (ಹಿ.ಸ.) : ಆ್ಯಂಕರ್ : ಮಾದಾರ ಮಹಾಸಭಾದ ಸದಸ್ಯತ್ವ ಆಂದೋಲನ ಹಾಗೂ ಮಾದಿಗ ಸಮುದಾಯ ಸಂಘಟನೆಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಮಾಜಿ ಸಚಿವರಾದ ಎಚ್. ಆಂಜನೇಯ ಅವರು ಪಾಲ್ಗೊಳ್ಳಲಿದ್ದು, ವಿಜಯನಗರ ಜಿಲ್ಲೆಯ ಜಿಲ್ಲಾ, ತಾಲ್ಲೂಕು
ಹೊಸಪೇಟೆ : ನಾಳೆ ಕರ್ನಾಟಕ ಮಾದಾರ ಮಹಾಸಭಾ ಸಭೆ


ಹೊಸಪೇಟೆ, 21 ಮೇ (ಹಿ.ಸ.) :

ಆ್ಯಂಕರ್ : ಮಾದಾರ ಮಹಾಸಭಾದ ಸದಸ್ಯತ್ವ ಆಂದೋಲನ ಹಾಗೂ ಮಾದಿಗ ಸಮುದಾಯ ಸಂಘಟನೆಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ಸಭೆ ಕರೆಯಲಾಗಿದೆ.

ಈ ಸಭೆಯಲ್ಲಿ ಮಾಜಿ ಸಚಿವರಾದ ಎಚ್. ಆಂಜನೇಯ ಅವರು ಪಾಲ್ಗೊಳ್ಳಲಿದ್ದು, ವಿಜಯನಗರ ಜಿಲ್ಲೆಯ ಜಿಲ್ಲಾ, ತಾಲ್ಲೂಕು, ಹೋಬಳಿ ಘಟಕದ ಪದಾಧಿಕಾರಿಗಳ ನೇಮಕಾತಿ ಹಾಗೂ ಸದಸ್ಯತ್ವ ಆಂದೋಲನ, ಸಮುದಾಯ ಸಂಘಟನೆ ಕುರಿತು ಚರ್ಚಿಸಲಾಗುವುದು.

ಆದ್ದರಿಂದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿಜಯನಗರ ಜಿಲ್ಲಾ ಮಾದಿಗ ಸಮಾಜದ ಮುಖಂಡರಾದ ಎಂ.ಸಿ. ವೀರಸ್ವಾಮಿ (9448006272), ಕೆ.ಪಿ. ಉಮಾಪತಿ (9880596065), ನಿಂಬಗಲ್ ರಾಮಕೃಷ್ಞ ( 9880771203 ), ಹೆಚ್. ಶೇಷು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande