ವೈದಿಕ ಮಂತ್ರಗಳ ನಡುವೆ ಚಾರ್ ಧಾಮ್ ಯಾತ್ರೆಗೆ ಶುಭಾರಂಭ
ಡೆಹ್ರಾಡೂನ್, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಬದ್ರಿನಾಥ್ ಧಾಮ್ ದ್ವಾರಗಳು ಗುರುವಾರ ಬೆಳಿಗ್ಗೆ 6.15ಕ್ಕೆ ವೈದಿಕ ಮಂತ್ರೋಚ್ಚಾರಣೆ ಮತ್ತು ಧಾರ್ಮಿಕ ಸಂಪ್ರದಾಯಗಳೊಂದಿಗೆ ಭಕ್ತರಿಗಾಗಿ ತೆರೆದವು. ಈ ಮೂಲಕ ಪವಿತ್ರ ಚಾರ್ ಧಾಮ್ ಯಾತ್ರೆಗೆ ಅಧಿಕೃತ ಚಾಲನೆ ದೊರಕಿತು. ದ್ವಾರ ತೆರೆಯುವ ಸ
ಬದರಿನಾಥ ದೇವಾಲಯ


ಡೆಹ್ರಾಡೂನ್, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಬದ್ರಿನಾಥ್ ಧಾಮ್ ದ್ವಾರಗಳು ಗುರುವಾರ ಬೆಳಿಗ್ಗೆ 6.15ಕ್ಕೆ ವೈದಿಕ ಮಂತ್ರೋಚ್ಚಾರಣೆ ಮತ್ತು ಧಾರ್ಮಿಕ ಸಂಪ್ರದಾಯಗಳೊಂದಿಗೆ ಭಕ್ತರಿಗಾಗಿ ತೆರೆದವು. ಈ ಮೂಲಕ ಪವಿತ್ರ ಚಾರ್ ಧಾಮ್ ಯಾತ್ರೆಗೆ ಅಧಿಕೃತ ಚಾಲನೆ ದೊರಕಿತು.

ದ್ವಾರ ತೆರೆಯುವ ಸಂದರ್ಭದಲ್ಲಿ ಬದ್ರಿಪುರಿ ಪ್ರದೇಶವು ಸಾಂಪ್ರದಾಯಿಕ ವಾದ್ಯಗಳ ನಾದ ಹಾಗೂ ಸೇನಾ ಬ್ಯಾಂಡ್ನ ಸುಮಧುರ ರಾಗಗಳಿಂದ ಭಕ್ತಿಭಾವದಲ್ಲಿ ತೇಲಿತು. ದೇಶ-ವಿದೇಶಗಳಿಂದ ಆಗಮಿಸಿದ ಸುಮಾರು 15 ಸಾವಿರ ಭಕ್ತರು ಭಗವಾನ್ ಬದ್ರಿವಿಶಾಲ್ ಹಾಗೂ ಅಖಂಡ ಜ್ಯೋತಿಯ ದರ್ಶನ ಪಡೆದು ಪುಣ್ಯ ಸಂಪಾದಿಸಿದರು.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಮಹಾಭಿಷೇಕ ಪೂಜೆ ನೆರವೇರಿಸಿ ದೇಶ ಹಾಗೂ ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ದ್ವಾರ ತೆರೆಯುತ್ತಿದ್ದಂತೆಯೇ ತಾಯಿ ಲಕ್ಷ್ಮೀ ದೇವಿಯ ವಿಗ್ರಹವನ್ನು ಮೂಲ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಜೊತೆಗೆ ಉಧವ, ಗರುಡ ದೋಳಿ ಮತ್ತು ಶಂಕರಾಚಾರ್ಯರ ಗದ್ದಿಯನ್ನು ಗರ್ಭಗುಡಿಯಲ್ಲಿ ಸ್ಥಾಪಿಸುವ ವಿಧಿವಿಧಾನಗಳು ನೆರವೇರಿದವು.

ಯಾತ್ರಾರ್ಥಿಗಳಿಗಾಗಿ ಸರ್ಕಾರ, ಬದ್ರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಆಡಳಿತವು ಸಮರ್ಪಕ ಸೌಲಭ್ಯಗಳನ್ನು ಒದಗಿಸಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಮಟ್ಟದಲ್ಲೂ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಧಾಮಿ ತಿಳಿಸಿದ್ದಾರೆ.

ಪರಿಸರ ಸಂರಕ್ಷಣೆಗೂ ವಿಶೇಷ ಒತ್ತು ನೀಡಿದ ಅವರು, ಹಸಿರು ಮತ್ತು ಸ್ವಚ್ಛ ಯಾತ್ರೆಗೆ ಸಹಕರಿಸುವಂತೆ ಭಕ್ತರಲ್ಲಿ ಮನವಿ ಮಾಡಿದರು.

ಜಾನಪದ ಸಂಸ್ಕೃತಿಯ ರಂಗು: ಧಾಮದಲ್ಲಿ ಹಬ್ಬದ ಸಂಭ್ರಮ

ಈ ಐತಿಹಾಸಿಕ ಸಂದರ್ಭದಲ್ಲಿ ಮಾನಾ ಮತ್ತು ಬಮಾನಿ ಗ್ರಾಮಗಳ ಮಹಿಳೆಯರು ಜುಮೈಲೋ ನೃತ್ಯ ಪ್ರದರ್ಶಿಸಿ ಜನಪದ ಸಂಸ್ಕೃತಿಯ ಝಲಕ್ ನೀಡಿದರು. ಭಕ್ತರು ಭಜನೆಗಳ ಮೂಲಕ ಭಕ್ತಿಭಾವ ವ್ಯಕ್ತಪಡಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಧಾಮಿ ಅವರು ಭಂಡಾರಕ್ಕೆ ಚಾಲನೆ ನೀಡಿ ಭಕ್ತರೊಂದಿಗೆ ಪ್ರಸಾದ ಸ್ವೀಕರಿಸಿದರು. ಭಂಡಾರ ವ್ಯವಸ್ಥೆಗಳನ್ನು ಪರಿಶೀಲಿಸಿ ನಿರ್ವಾಹಕರೊಂದಿಗೆ ಸಂವಾದ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande