ಕೃಷಿಯೇ ದೇಶದ ಸಮೃದ್ಧಿಯ ಅಡಿಪಾಯ : ಪ್ರಧಾನಿ ಮೋದಿ
ನವದೆಹಲಿ, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೃಷಿಯು ದೇಶದ ಸಮೃದ್ಧಿಯ ಅಡಿಪಾಯವಾಗಿದ್ದು, ರೈತರು ದೇಶದ ನಿಜವಾದ ಅನ್ನದಾತರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, “ಕೃಷಿ ವರ್ಧನ್ಯಾ, ಕೃಷಿ ಮರ್ಧನ್ಯಾ, ಪ್ರಾಣಿ ಜೀ
Pm


ನವದೆಹಲಿ, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೃಷಿಯು ದೇಶದ ಸಮೃದ್ಧಿಯ ಅಡಿಪಾಯವಾಗಿದ್ದು, ರೈತರು ದೇಶದ ನಿಜವಾದ ಅನ್ನದಾತರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, “ಕೃಷಿ ವರ್ಧನ್ಯಾ, ಕೃಷಿ ಮರ್ಧನ್ಯಾ, ಪ್ರಾಣಿ ಜೀವನ ಕೃಷಿಃ” ಎಂಬ ಸಂಸ್ಕೃತ ಗಾದೆಯನ್ನು ಉಲ್ಲೇಖಿಸಿದರು. ಕೃಷಿಯು ಸಂಪತ್ತನ್ನು ನೀಡುತ್ತದೆ, ಬುದ್ಧಿಯನ್ನು ಶುದ್ಧೀಕರಿಸುತ್ತದೆ ಹಾಗೂ ಎಲ್ಲಾ ಜೀವಿಗಳ ಬದುಕಿನ ಮೂಲಾಧಾರವಾಗಿದೆ ಎಂಬ ಅರ್ಥವನ್ನು ಅವರು ವಿವರಿಸಿದರು.

ರೈತ ಸಹೋದರ-ಸಹೋದರಿಯರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೇ ದೇಶದ ಅಭಿವೃದ್ಧಿಗೆ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ರೈತರು ಬೆಳೆ ಬೆಳೆದು ಜಗತ್ತಿಗೆ ಆಹಾರ ಒದಗಿಸುವುದರಿಂದ ಅವರು ನಿಜವಾದ ದಾನಿಗಳು ಎಂದು ಅವರು ಅಭಿಪ್ರಾಯಪಟ್ಟರು.

“ಅನ್ನವಿಲ್ಲದೆ ಬೇರೆ ಯಾವುದೇ ದಾನ ಅಥವಾ ಸಂಪತ್ತು ಉಪಯೋಗಕ್ಕೆ ಬರುವುದಿಲ್ಲ. ಆದ್ದರಿಂದ ಕೃಷಿ ಮಾಡುವ ರೈತನ ಸ್ಥಾನ ಎಲ್ಲರಿಗಿಂತ ಶ್ರೇಷ್ಠವಾಗಿದೆ” ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande