ಲಂಡನ್ ನಲ್ಲಿ ಬಸವ ಜಯಂತಿ ಸಂಭ್ರಮ ; ಬಸವೇಶ್ವರ ಪ್ರತಿಮೆಗೆ ನಮನ
ಲಂಡನ್, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಸವ ಜಯಂತಿ ಆಚರಣೆಯ ಮುನ್ನಾದಿನದಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ವತಿಯಿಂದ ಲಂಡನ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತಕ್ಕೆ ಯುಕೆ ಉಪ ಹೈಕಮಿಷನರ್ ಆಗಿರುವ ಚಂದ್ರು ಅಯ್ಯರ್ ಅವರು ಐತಿಹಾಸಿಕ ಬಸವೇಶ್ವರರ ಪ್ರತಿಮೆಗೆ
ಬಸವ ಜಯಂತಿ


ಲಂಡನ್, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಸವ ಜಯಂತಿ ಆಚರಣೆಯ ಮುನ್ನಾದಿನದಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ವತಿಯಿಂದ ಲಂಡನ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತಕ್ಕೆ ಯುಕೆ ಉಪ ಹೈಕಮಿಷನರ್ ಆಗಿರುವ ಚಂದ್ರು ಅಯ್ಯರ್ ಅವರು ಐತಿಹಾಸಿಕ ಬಸವೇಶ್ವರರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ಬಸವೇಶ್ವರ ಅವರ ಸಮಾನತೆ, ಮಾನವೀಯತೆ ಮತ್ತು ಶ್ರಮದ ಮಹತ್ವ ಸಾರುವ ತತ್ವಗಳನ್ನು ಸ್ಮರಿಸಲಾಯಿತು. ಬಸವೇಶ್ವರರ ಸಂದೇಶವನ್ನು ವಿಶ್ವದಾದ್ಯಂತ ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದವರ ಸೇವೆಯನ್ನು ಕೊಂಡಾಡಲಾಯಿತು.

ಈ ವೇಳೆ ದಿವಂಗತ ಭೀಮಣ್ಣ ಖಂಡ್ರೆ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮವೂ ನಡೆಯಿತು. ಬಸವೇಶ್ವರರ ತತ್ವಗಳನ್ನು ಜನಮಾನಸಕ್ಕೆ ತಲುಪಿಸಲು ಅವರು ನೀಡಿದ ಕೊಡುಗೆಗಳನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande