
ನವದೆಹಲಿ, 19 ಏಪ್ರಿಲ್ (ಹಿ.ಸ.):
ಆ್ಯಂಕರ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ದೆಹಲಿಯಲ್ಲಿ ‘ಸಂಘ ಗಂಗಾ ಕೆ ತೀನ್ ಭಾಗೀರಥ’ ಎಂಬ ವಿಶೇಷ ಹಿಂದಿ ನಾಟಕವನ್ನು ಏಪ್ರಿಲ್ 21ರಂದು ಸಂಜೆ 6 ಗಂಟೆಗೆ ಪ್ರದರ್ಶಿಸಲಾಗುತ್ತಿದೆ. ಅರ್ವಚಿನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಯಲಿರುವ ಈ ನಾಟಕದ ಕುರಿತು ನಿರ್ದೇಶಕ ಸಂಜಯ್ ಪೆಂಡ್ಸೆ ಮಾಹಿತಿ ನೀಡಿದ್ದಾರೆ.
ಸಂಘದ ನೂರು ವರ್ಷದ ಪಯಣವನ್ನು ಆಧರಿಸಿ ರೂಪುಗೊಂಡಿರುವ ಈ ನಾಟಕವು ಸಂಘದ ಮೊದಲ ಮೂವರು ಸರಸಂಘಚಾಲಕರಾದ ಡಾ. ಕೇಶವ್ ಬಲಿರಾಮ್ ಹೆಡ್ಗೇವಾರ್, ಮಾಧವ್ ಸದಾಶಿವ್ ಗೋಲ್ವಾಲ್ಕರ್ ಹಾಗೂ ಬಾಲಾಸಾಹೇಬ್ ದೇವರಾಸ್ ಅವರ ಜೀವನ, ಚಿಂತನೆ ಮತ್ತು ಕೊಡುಗೆಗಳನ್ನು ಒಳಗೊಂಡಿದೆ. ಸಂಘದ ಆರಂಭದಿಂದ ಇಂದಿನವರೆಗಿನ ಶತಮಾನ ಪಯಣವನ್ನು ಜೀವಂತವಾಗಿ ಪ್ರೇಕ್ಷಕರ ಮುಂದಿಡುವ ಉದ್ದೇಶದಿಂದ ಈ ನಾಟಕವನ್ನು ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
ನಾಟಕದ ಮೊದಲ ಪ್ರದರ್ಶನಗಳು ಏಪ್ರಿಲ್ 15 ಮತ್ತು 18ರಂದು ದೆಹಲಿಯ ವಿವಿಧ ಸ್ಥಳಗಳಲ್ಲಿ ನಡೆದಿದ್ದು, ಇಂದು ಸಂಜೆ 6 ಗಂಟೆಗೆ ಶ್ಯಾಮಪ್ರಸಾದ್ ಮುಖರ್ಜಿ ಕಾಲೇಜುದಲ್ಲಿ ಮತ್ತೊಂದು ಪ್ರದರ್ಶನ ನಡೆಯಲಿದೆ ಎಂದು ಸಂಜಯ್ ಪೆಂಡ್ಸೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ನಾಟಕ ಪ್ರದರ್ಶನಗಳ ವೇಳಾಪಟ್ಟಿ ಹೀಗಿದೆ:
ಏಪ್ರಿಲ್ 21: ಸಂಜೆ 6 ಗಂಟೆಗೆ – ಅರ್ವಚಿನ್ ಇಂಟರ್ನ್ಯಾಷನಲ್ ಶಾಲೆ
ಏಪ್ರಿಲ್ 22: ಸಂಜೆ 4 ಗಂಟೆಗೆ – ಲಿಮಿಟೆಡ್ ಆಡಿಟೋರಿಯಂ
ಏಪ್ರಿಲ್ 24: ಸಂಜೆ 6 ಗಂಟೆಗೆ – ದ್ವಾರಕಾ ಸೆಕ್ಟರ್ 3
ಏಪ್ರಿಲ್ 25: ಸಂಜೆ 6 ಗಂಟೆಗೆ – ಎಐಸಿಟಿಇ
ಏಪ್ರಿಲ್ 26: ಬೆಳಗ್ಗೆ 9 ಗಂಟೆಗೆ – ಸತ್ಯವತಿ ಕಾಲೇಜು
ಏಪ್ರಿಲ್ 26: ಸಂಜೆ 5:30ಕ್ಕೆ – ಕಮಲಾ ನೆಹರೂ ಕಾಲೇಜು
ಏಪ್ರಿಲ್ 28: ಸಂಜೆ 6 ಗಂಟೆಗೆ – ಶಹೀದ್ ಸುಖದೇವ್ ಕಾಲೇಜು
ಈ ನಾಟಕದ ಮೂಲಕ ಸಂಘದ ಇತಿಹಾಸ, ಸಂಘಟನೆಗೆ ಕೊಡುಗೆ ನೀಡಿದ ಪ್ರಮುಖ ನಾಯಕರ ಜೀವನ ಮತ್ತು ಅವರ ಚಿಂತನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa