ಮೈಸೂರು : ಕಾವೇರಿ ನದಿ ನೀರಿನ ರಭಸಕ್ಕೆ 6 ಮಂದಿ ಬಲಿ
ಮೈಸೂರು, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ಮೈಸೂರು ಜಿಲ್ಲೆಯ ಕೆಆರ್ ನಗರದ ಅರ್ಕೇಶ್ವರ ದೇಗುಲ ಸಮೀಪದ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ನಡೆದಿದೆ. ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ದೇಗುಲದ ಬಳಿಯ ಹಜರತ್ ಖಾದರ್ ಲಿಂಗವಲ್ಲಿ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ
Cauvery river


ಮೈಸೂರು, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮೈಸೂರು ಜಿಲ್ಲೆಯ ಕೆಆರ್ ನಗರದ ಅರ್ಕೇಶ್ವರ ದೇಗುಲ ಸಮೀಪದ ಕಾವೇರಿ ನದಿಯಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ ನಡೆದಿದೆ.

ಹಳೆ ಎಡತೊರೆ ಅರ್ಕೇಶ್ವರ ಸ್ವಾಮಿ ದೇಗುಲದ ಬಳಿಯ ಹಜರತ್ ಖಾದರ್ ಲಿಂಗವಲ್ಲಿ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಹಲವು ಮುಸ್ಲಿಂ ಕುಟುಂಬಗಳು ದರ್ಗಾಕ್ಕೆ ಆಗಮಿಸಿದ್ದವು. ಕಾರ್ಯಕ್ರಮದ ನಡುವೆ ಎಂಟು ಮಂದಿ ಕಾವೇರಿ ನದಿಗೆ ಇಳಿದು ಈಜಲು ಮುಂದಾಗಿದ್ದರು.

ಆದರೆ ನದಿಯಲ್ಲಿದ್ದ ನೀರಿನ ರಭಸ ಮತ್ತು ಆಳಕ್ಕೆ ಸಿಲುಕಿದ ಪರಿಣಾಮ ಆರು ಮಂದಿ ಮೇಲೆ ಬರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ.

ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಉಳಿದ ಇಬ್ಬರನ್ನು ಜೀವಂತವಾಗಿ ಹೊರತೆಗೆದಿದ್ದಾರೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತರನ್ನು ಮೈಸೂರಿನ 5 ವರ್ಷದ ಉಮೆರ್, ಬೆಂಗಳೂರಿನ 13 ವರ್ಷದ ಐಮನ್, ಕೆಆರ್ ನಗರದ 13 ವರ್ಷದ ಅಫೀಫ್, ಬೆಂಗಳೂರಿನ 23 ವರ್ಷದ ಯಾಸಿನ್, ಬೆಂಗಳೂರಿನ 22 ವರ್ಷದ ನೇಹಾ ಹಾಗೂ ಊಟಿಯ 30 ವರ್ಷದ ಫಾತೀಮಾ ಎಂದು ಗುರುತಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಕೆಆರ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande