
ಬಳ್ಳಾರಿ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲೂಕಿನ ಹದ್ದಿನಗುಂಡು ಗ್ರಾಮದ ಸರ್ವೆ ನಂ. 154*1ರಲ್ಲಿಯ 4.56 ಎಕರೆ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಕಂದಾಯ ಇಲಾಖೆಯ ತಪ್ಪಿತಸ್ತ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಸಾಮಾಜಿಕ ಹೋರಾಟಗಾರರ ಸಿದ್ದೇಶ್ ಊಳೂರು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಡಳಿತಕ್ಕೆ ದಾಖಲೆಗಳ ಸಮೇತ ಸೋಮವಾರ ಲಿಖಿತ ದೂರು ಸಲ್ಲಿಸಿರುವ ಅವರು, ಹದ್ದಿನಗುಂಡು ಗ್ರಾಮದ ಸರ್ವೆ ನಂ. 154*1ರಲ್ಲಿಯ 4.56 ಎಕರೆ ಭೂಮಿ ಕುರಿತು ಸರ್ಕಾರಿ ದಾಖಲೆಗಳಲ್ಲಿ (ಜಿಡಿ) ಸರ್ಕಾರಿ ಭೂಮಿ ಎಂದು ದಾಖಲಾಗಿದೆ. ಈ ಭೂಮಿಯನ್ನು ಬಳ್ಳಾರಿ ಸ್ಟ್ರೀಲ್ಸ್ ಅಂಡ್ ಅಲೋಯ್ಸ್
ಲಿಮಿಟೆಡ್ಗೆ ಸೇರಿದ ಭೂಮಿ ಎಂದು ಕೆಲ ದಾಖಲೆಗಳು ಹೇಳುತ್ತಿವೆ.
ಆದರೆ, ಈ ಭೂಮಿಯನ್ನು ಬಳ್ಳಾರಿ ಸ್ಟ್ರೀಲ್ಸ್ ಅಂಡ್ ಅಲೋಯ್ಸ್ ಲಿಮಿಟೆಡ್ಗೆ ವರ್ಗಾವಣೆ ಆಗಿರುವ ಕುರಿತು ಎಲ್ಲೂ ಸರ್ಕಾರಿ ದಾಖಲೆಗಳು ಸಿಗುತ್ತಿಲ್ಲ. ಆದರೂ, ಈ ಭೂಮಿಯನ್ನು ದಸ್ತಾವೇಜಿನ ಸಂಖ್ಯೆ: ಐಙ-1-3495-2025-26 ದಿನಾಂಕ : 27.05.2026ರ ಪ್ರಕಾರ ರಿಯಾಜ್ ಅಬ್ದುಲ್ ಶೇಖ್ ತಂದೆ ಲೇಟ್ ಅಬ್ದುಲ್ ಶೇಖ್ ಅವರ ಹೆಸರಿಗೆ ಕ್ರಯವಾಗಿದೆ. ರಿಯಾಜ್ ಅಬ್ದುಲ್ ಶೇಖ್ ಅವರ ಹೆಸರಿಗೆ ಈ ಭೂಮಿ ವರ್ಗಾವಣೆ ಆಗಿರುವುದನ್ನು ತಕ್ಷಣವೇ ತಡೆದು, ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್