
ಬೀದರ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗಡಿನಾಡು ಹಾಗೂ ಹೊರನಾಡು ಪ್ರದೇಶಗಳಲ್ಲಿ ಇರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಸಿಗುವ ಮೂಲ ಸೌಕರ್ಯಗಳನ್ನು ಒದಗಿಸಲು ಕೋರಿ ತೆಲಗಾಂಣ ರಾಜ್ಯದ ಕನ್ನಡ ಸಂಘಟನೆಗಳಾದ ಓಂ ಸಾಯಿ ರೂರಲ್ ಡೆವಲಮೆಂಟ್ ಸೂಸ್ಯಟಿ ಹಾಗೂ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದ್ರಾಬಾದ ಅವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರು ಮನವಿ ಸ್ವೀಕರಿಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಕನ್ನಡ ಭಾಷಿಕರು ಹಲವು ದಶಕಗಳಿಂದ ಅಖಂಡ ಆಂಧ್ರಪ್ರದೇಶದಲ್ಲಿ ನೆಲೆಸಿ ಕನ್ನಡ ಭಾಷೆ, ಸಂಸ್ಕøತಿ ಮತ್ತು ಅಸ್ತಿತ್ವವನ್ನು ಕಾಪಾಡಿಕೊಳ್ಳಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಆದಾಗ್ಯೂ, ಈ ಭಾಗದ ಕನ್ನಡಿಗರು ಶಿಕ್ಷಣ, ಉದ್ಯೋಗ ಹಾಗೂ ಆಡಳಿತಾತ್ಮಕ ಸೌಲಭ್ಯಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ತೆಲಗಾಂಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣ ಖೇಡ ತಾಲೂಕಿನಲ್ಲಿ ಇರುವ ಕಾರಾಮುಂಗಿ, ಔಧತಪುರ, ಯಸಗಿ, ಗೌಡಗಾಂವ, ಶಹಾಪೂರ, ಮೂರ್ಗಿ, ಶಿಖರಖಾನ್, ಗೂಂದೆಗಾಂವ, ರತ್ನಾಪೂರ, ಮಂಗಲಗಿ, ಮೈನಳ್ಳಿ, ಹೀಗೆ ವಿವಿಧ ಗ್ರಾಮಗಳಲ್ಲಿ ಕನ್ನಡ ಶಾಲೆಗಳಿವೆ. ಈ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಕರ್ನಾಟಕ ಸರ್ಕಾರ ಮಾಡಬೇಕೆಂದು ಸಂಘಟನೆಗಳು ಮನವಿ ಮಾಡಿದವು.
ಈ ನಿಯೋಗದಲ್ಲಿ ಡಾ. ಜಗನ್ನಾಥ ಹೆಬ್ಬಾಳೆ, ಓಂ ಸಾಯಿ ರೂರಲ್ ಡೆವಲಮೆಂಟ್ ಸೊಸ್ಯಟಿ ಅಧ್ಯಕ್ಷರಾದ ಶಿವಶರಣಪ್ಪ ಗಣೇಶಪೂರ್ ಮತ್ತು ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಹೈದ್ರಾಬಾದ ಅಧ್ಯಕ್ಷರಾದ ಧರ್ಮೇಂದ್ರ ಪೂಜಾರಿ ಬಗದೂರಿ, ಡಾ. ರಾಜಕುಮಾರ ಹೆಬ್ಬಾಳೆ, ನಾಗಪ್ಪಾ ಸಾಮಾಜಿಕ ಸಾಂಸ್ಕøತಿಕ ಮತ್ತು ಸೇವಾ ಸಂಸ್ಥೆ ಅಧ್ಯಕ್ಷರಾದ ಭೀಮರಾವ ಬೀದರಕರ್, ಬಸವ ಬೆಳಕು ಸಂಪಾದಕರಾದ ರಾಜಕುಮಾರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್