



ಬಳ್ಳಾರಿ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಬಳ್ಳಾರಿ ಜಿಲ್ಲಾ ಘಟಕವು 2025-26ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಶೇ. 85% ಮತ್ತು ಹೆಚ್ಚಿನ ಅಂಕಗಳನ್ನು ಪಡೆದು ತೇರ್ಗಡೆ ಆಗಿರುವ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ - 2026 ವನ್ನು ಏರ್ಪಡಿಸಿದೆ.
ಅಧ್ಯಕ್ಷರಾದ ಎಸ್.ಎಂ. ಭದ್ರಯ್ಯ ಅವರು ಈ ಮಾಹಿತಿ ನೀಡಿದ್ದು, ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರು ದೃಢೀಕರಿಸಿದ ಅಂಕಪಟ್ಟಿ, ಪಾಸ್ಪೆÇೀರ್ಟ್ ಸೈಜ್ ಫೆÇೀಟೋ (ಪ್ರಶಸ್ತಿ ಪತ್ರಕ್ಕಾಗಿ) ಹಾಗೂ ಜಾತಿ ಪ್ರಮಾಣ ಪತ್ರವನ್ನು ಗೂಗಲ್ ಫಾರ್ಮ್ ಮೂಲಕವೇ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
ಹೆಚ್ಚಿನ ಮಾಹಿತಿಗಾಗಿ, 94489 77285, 9036851961, 98868 53441, 94480 30860, 73377 45561 ಗೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್