
ಬಳ್ಳಾರಿ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವೀರಶೈವ ಲಿಂಗಾಯತ ರಡ್ಡಿ ಸಂಘದ ಬಳ್ಳಾರಿ ಜಿಲ್ಲಾ ಘಟಕಕ್ಕೆ ಹಿರಿಯರು - ಅನುಭವಿಗಳು ಮತ್ತು ಯುವಶಕ್ತಿಯ 21 ಸದಸ್ಯರನ್ನು ಒಳಗೊಂಡ ನೂತನ ಆಡಳಿತ - ಕಾರ್ಯಕಾರಿ ಮಂಡಳಿಯನ್ನು ರಚಿಸಿದೆ.
ಹೊಸ ಕಾರ್ಯಕಾರಿ ಮಂಡಳಿಯಲ್ಲಿ ಡಾ. ಎಸ್.ಜೆ.ವಿ. ಮಹಿಪಾಲ್, ಎನ್. ಅಯ್ಯಪ್ಪ, ಜೆ.ಎಸ್. ನೇಪಾಕ್ಷಪ್ಪ, ರವಿ ರಾಜಶೇಖರ ರಡ್ಡಿ, ಜೋಳದರಾಶಿ ಬಸವರಾಜ್, ಟಿ. ವಿರುಪಾಕ್ಷಗೌಡ, ಸಂಗನಕಲ್ಲು ಯುಧಿಷ್ಟರ, ಬಿ. ರವೀಂದ್ರನಾಥ, ಕೆರೆನಳ್ಳಿ ಚಂದ್ರಶೇಖರ, ಅಭಿನಂದನ್ ಪಾಟೀಲ್, ಎನ್. ಚಂದ್ರಶೇಖರ ಯರಂಗಳಿ, ಡಾ.ಭಾಗ್ಯಲಕ್ಷ್ಮಿ, ಟಿ.ಎಂ. ಜಡೇಶ, ಮಿಂಚೇರಿ ನರೇಂದ್ರಬಾಬು, ಸಂಜೀವರಾಯನಕೋಟೆ ಸೋಮನಗೌಡ, ಕೆ. ನಂದೀಶ್ ಕುಮಾರ್, ಬಣಾಪುರ ನಾಗರಾಜ, ಜೆ.ಬಿ. ಸುಮಂಗಳ, ಗೋನಾಳ್ ಮುರಹರಗೌಡ, ಹೆಚ್. ಮಹಾಬಲೇಶ್ವರಗೌಡ, ಹೆಚ್. ವೀರಭದ್ರಗೌಡ ಅವರು ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಸಮಿತಿಯು ಜಿಲ್ಲೆಯಾದ್ಯಂತ ಸಂಚರಿಸಿ ರಡ್ಡಿ ಸಮಾಜವನ್ನು ಸಂಘಟಿಸಿ, ವಿವಿಧ ಘಟಕಗಳನ್ನು ರಚಿಸಲು ನಿರ್ಧರಿಸಿತು.
ಮೇ 30 ರಂದು ಸಾದ್ವಿ ಮಲ್ಲಮ್ಮ ಜಯಂತಿ
ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಮೇ 30 ರಂದು ಅತ್ಯಂತ ವಿಜೃಂಭಣೆಯಿಂದ - ವೈಭವದಿಂದ ಆಚರಿಸಲು ಸಮಾಜದ ಎಲ್ಲಾ ಮುಖಂಡರು ಒಮ್ಮತದ ನಿರ್ಧಾರ ಕೈಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್