ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್
ಬಳ್ಳಾರಿ, 07 ಮಾರ್ಚ್ (ಹಿ.ಸ.) ಆ್ಯಂಕರ್: ಪಂಚಾಂಗವು ಸಂಪೂರ್ಣ ಗಣಿತವನ್ನು ಆಧರಿಸಿದ್ದು ವೈಜ್ಞಾನಿಕ ಲೆಕ್ಕಾಚಾರವನ್ನು ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಆಡಳಿತಾಧಿಕಾರಿ ಸಿ. ನಾಗರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋ
ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್


ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್


ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್


ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್


ಪಂಚಾಂಗವು ವೈಜ್ಞಾನಿಕ ಲೆಕ್ಕಾಚಾರಗಳನ್ನು ಒಳಗೊಂಡಿದೆ : ಸಿ. ನಾಗರಾಜ್


ಬಳ್ಳಾರಿ, 07 ಮಾರ್ಚ್ (ಹಿ.ಸ.)

ಆ್ಯಂಕರ್: ಪಂಚಾಂಗವು ಸಂಪೂರ್ಣ ಗಣಿತವನ್ನು ಆಧರಿಸಿದ್ದು ವೈಜ್ಞಾನಿಕ ಲೆಕ್ಕಾಚಾರವನ್ನು ಒಳಗೊಂಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಆಡಳಿತಾಧಿಕಾರಿ ಸಿ. ನಾಗರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್ ಸದ್ಗುರು ಕಾಲೋನಿಯ ಸದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಮಠಂ ಗುರುಪ್ರಸಾದ್ ಅವರು ಬರೆದಿರುವ ಶ್ರೀ ಉಮಾ ಮಹೇಶ್ವರ ಪಂಚಾಂಗ ಬಿಡುಗಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಂಗ ಆಯಾ ವರ್ಷದ ಆಗುಹೋಗುಗಳನ್ನು ತಿಳಿಸುತ್ತದೆ. ಜ್ಯೋತಿಷಿಗಳು ಗ್ರಹಗಳ ಚಲನೆ, ನಕ್ಷತ್ರೆಗಳ ಸಂಚಾರ, ತಿಥಿ - ವಾರ ಮತ್ತು ಇನ್ನಿತರೆಗಳ ಆಧರಿಸಿ ವ್ಯಕ್ತಿಗಳ ಆಗು ಹೋಗುಗಳ ವಿಶ್ಲೇಷಣೆ ಮಾಡಿ, ಮಾಹಿತಿ ನೀಡುತ್ತಾರೆ. ಈ ನಿಟ್ಟಿನಲ್ಲಿ ಪಂಚಾಂಗ ವೈಜ್ಞಾನಿಕ ಆಧಾರಗಳನ್ನು ಹೊಂದಿದೆ ಎಂದರು.

ಪಂಚಾಂಗಕತೃ `ಜೋತಿಷ್ಯ ರತ್ನ' ಪಂಡಿತ ಮಠಂ ಗುರುಪ್ರಸಾದ್ ಅವರು, ಜೋತಿಷ್ಯ, ವೇದಾಂತ ಮತ್ತು ಸಿದ್ದಾಂತಗಳು ಸುಖಕರ ಜೀವನಕ್ಕೆ ಅಗತ್ಯ.

18 ಮಹರ್ಷಿಗಳು ಜೋತಿಷ್ಯ ಶಾಸ್ತ್ರದ ಮೂಲ ಪುರುಷರು. ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳಿದ್ದು ಸಾಕಷ್ಟು ಮಾಹಿತಿಯನ್ನು ಒಳಗೊಂಡಿದೆ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ ಅವರು, ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಪಂಚಾಂಗ ಪಠಣೆ ಮಾಡಲು ಅವಕಾಶ ನೀಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಗುರುಚರಣಾನಂದಗಿರಿ ಮಾತಾಜೀ(ಕೊಕ್ಕರಚೇಡು ಶರಣಮ್ಮ ಅವ್ವನವರು) ಅವರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು. ಸದ್ಗುರು ಸದಾನಂದ ಆಶ್ರಮ ಟ್ರಸ್ಟ್ ಅಧ್ಯಕ್ಷರು, ಹಿರಿಯ ನ್ಯಾಯವಾದಿ ವಿವೇಕಾನಂದ ಸ್ವಾಮಿ, ಬಳ್ಳಾರಿ ಕಲ್ಚರಲ್ ಅಕ್ಟಿವಿಟೀಸ್ ಅಸೋಸಿಯೇಷನ್ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ಗೌರವಾಧ್ಯಕ್ಷರಾದ ಶೀಲಾಬ್ರಹ್ಮಯ್ಯ, ಕಿಷ್ಕಿಂದ ವಿಶ್ವವಿದ್ಯಾಲಯದ ಚಾನ್ಸಲರ್ ಡಾ. ಯಶವಂತ್ ಭೂಪಾಲ್, ಹ್ಯಾಲೀಸ್ ಬ್ಲೂ ಸ್ಟೀಲ್ಸ್ನ

ಕೆ.ಎಂ. ಶಿವಮೂರ್ತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande