





ಬಳ್ಳಾರಿ, 07 ಮಾರ್ಚ್ (ಹಿ.ಸ.)
ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಎನ್ಎಸ್ಎಸ್ - ರಾಷ್ಟ್ರೀಯ ಸ್ವಯಂ ಸೇವಾ ಸಪ್ತಾಹ ಹರಗಿನಡೋಣಿಯ ಶ್ರೀ ಬುಗ್ಗ ಸಿದ್ದಲಿಂಗೇಶ್ವರ ಶಾಲೆಯಲ್ಲಿ ಪ್ರಾರಂಭವಾಗಿದೆ.
ರಾಷ್ಟ್ರೀಯ ಸ್ವಯಂ ಸೇವಾ ಸಪ್ತಾಹವನ್ನು `ಸ್ವಚ್ಛ ಭಾರತ್’ ಅಭಿಯಾನದ ಅಡಿಯಲ್ಲಿ ಹಮ್ಮಿಕೊಂಡಿದ್ದು ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದು, ಹರಗಿನಡೋಣಿಯ ಶ್ರೀ ಬುಗ್ಗ ಸಿದ್ದಲಿಂಗೇಶ್ವರ ಶಾಲೆಯ ಶಿಕ್ಷಕಿಯರು – ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.
ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಅಧಿಕಾರಿ ರಾಜೇಶ್ ಕುಮಾರ್ ಜೆ.ಎಂ ಮತ್ತು ಸಮನ್ವಯ ಅಧಿಕಾರಿ ಕೆ. ಪಂಪನಗೌಡ ಅವರು ಸಪ್ತಾಹದ ನೇತೃತ್ವವಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್