ಕವಿವಿಯಲ್ಲಿ ಮಾ.9ರಂದು ‘ಮೀಡಿಯಾ ಫೆಸ್ಟ್
ಧಾರವಾಡ, 07 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ‘ಮೀಡಿಯಾ ಫೆಸ್ಟ್-2026’ ಕಾರ್ಯಕ್ರಮವು ಮಾರ್ಚ್ 9ರಂದು ಬೆಳಿಗ್ಗೆ 10:30ಕ್ಕೆ ಕವಿವಿಯ ಕನ
ಕವಿವಿಯಲ್ಲಿ ಮಾ.9ರಂದು ‘ಮೀಡಿಯಾ ಫೆಸ್ಟ್


ಧಾರವಾಡ, 07 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ‘ಮೀಡಿಯಾ ಫೆಸ್ಟ್-2026’ ಕಾರ್ಯಕ್ರಮವು ಮಾರ್ಚ್ 9ರಂದು ಬೆಳಿಗ್ಗೆ 10:30ಕ್ಕೆ ಕವಿವಿಯ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆರಂಭವಾಗಲಿದೆ.

ಕಾರ್ಯಕ್ರಮವನ್ನು ಕವಿವಿ ಕುಲಪತಿ ಎ.ಎಂ.ಖಾನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ನೂಲ್ವಿ ಹಾಗೂ ವರದಿಗಾರ ಶ್ರೀಕಾಂತ ಕುಬಕಡ್ಡಿ ಭಾಗವಹಿಸಲಿದ್ದಾರೆ. ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮೀಡಿಯಾ ಫೆಸ್ಟ್ ಅಂಗವಾಗಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸ್ಕ್ರಿಪ್ಟ್ ಬರವಣಿಗೆ, ಕಿರು ಸಂದರ್ಶನ, ವಾಕ್ ಥ್ರೂ ಮತ್ತು ಪಿಟುಸಿ, ರೇಡಿಯೋ ಜಾಕಿ ಪ್ರಸ್ತುತಿ, ರೀಲ್ಸ್ ನಿರ್ಮಾಣ ಹಾಗೂ ಮೊಬೈಲ್ ಜರ್ನಲಿಸಂ (ಮೊಜೋ) ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.

ಮಾರ್ಚ್ 10ರಂದು ವಿಚಾರ ಸಂಕಿರಣ ನಡೆಯಲಿದ್ದು, ಡಾ. ಎ.ಎಸ್. ಬಾಲಸುಬ್ರಮಣ್ಯ ಅವರು ಪತ್ರಿಕೋದ್ಯಮದಲ್ಲಿ ಎಐ ಆಧಾರಿತ ವಿಷಯಗಳ ವಿಶ್ವಾಸಾರ್ಹತೆ ಕುರಿತು ಹಾಗೂ ಹಿರಿಯ ಪತ್ರಕರ್ತ ಸುಭಾಷ್ ಹೂಗಾರ ಅವರು ಪತ್ರಿಕೋದ್ಯಮ ಮತ್ತು ನವ ತಂತ್ರಜ್ಞಾನ ಬಳಕೆ ಕುರಿತು ಉಪನ್ಯಾಸ ನೀಡಲಿದ್ದಾರೆ.

ಅದೇ ದಿನ ಮಧ್ಯಾಹ್ನ 2:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕವಿವಿ ಕುಲಸಚಿವ ಡಾ. ಶಂಕರೆಪ್ಪ ವಣಿಕ್ಯಾಳ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande