
ರಾಯಚೂರು, 07 ಮಾರ್ಚ್ (ಹಿ.ಸ.)
ಆ್ಯಂಕರ್ : ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಆದೇಶಗಳನ್ವಯ ಈ ಹಿಂದೆ ನೇಮಿಸಲಾದ ಕಾನೂನು ಸಲಹೆಗಾರರು ಹುದ್ದೆಗೆ ರಾಜೀನಾಮೆಯನ್ನು ನೀಡಿರುವುದರಿಂದ ಈ ಕಾರ್ಯಾಲಯದಿಂದ ಅಧಿಸೂಚನೆ ಹೊರಡಿಸಿ ಮಲ್ಲಿಕಾರ್ಜುನಗೌಡ, ನಿವೃತ್ತ ಜಿಲ್ಲಾ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಇವರನ್ನು ನೇಮಿಸಿ ಆದೇಶಿಸಲಾಗಿತ್ತು, ಆದರೆ ಸದರಿಯವರು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಕಾರಣ ಈ ಕಾರ್ಯಾಲಯದ ಕಾನೂನು ಸಲಹೆಗಾರರ ಹುದ್ದೆಯು ಖಾಲಿ ಇರುತ್ತದೆ.
ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಕಂದಾಯ/ ಭೂಮಂಜೂರಾತಿ ನಿಯಮ/ ಭೂಸುಧಾರಣಾ/ ಭೂಸ್ವಾಧೀನ ಕಾಯ್ದೆ/ ನಿಯಮ ಇನ್ನಿತರ ಕಾಯ್ದೆ/ ನಿಯಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡಲು ಸೃಜಿಸಲಾಗಿರುವ ಕಾನೂನು ಸಲಹೆಗಾರರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ನ್ಯಾಯಾಧೀಶರು/ ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಗಳಿಗೆ ಕರ್ತವ್ಯಗಳು, ಜವಾಬ್ದಾರಿಗಳನ್ನು ಮತ್ತು ಮೇಲಾಧಿಕಾರಿಗಳ ಸೂಚನೆಗಳು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಕಾನೂನು ಸಲಹೆಗಾರರಿಗೆ ಒಂದು ನಿರ್ದಿಷ್ಟ ಏಕರೂಪದ ಸಂಚಿತ ವೇತನವನ್ನು ನಿಗಧಿಪಡಿಸಿ ಅಂತಹ ವೇತನದ ಮೇರೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಅಸಕ್ತಿಯುಳ್ಳ ನಿವೃತ್ತ ಸರ್ಕಾರಿ/ನ್ಯಾಯಾಂಗ ಇಲಾಖೆಯ ಅಧಿಕಾರಿಗಳನ್ನು ನಿವೃತ್ತ ನ್ಯಾಯಾಧೀಶರು/ ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಇವರಿಗೆ 70,000 ರೂ. ಹಾಗೂ ನಿವೃತ್ತ ಕಂದಾಯ ಇಲಾಖೆ ನೌಕರರು (ನಿವೃತ್ತ ತಹಶೀಲ್ದಾರ್ /ಉಪ ತಹಶೀಲ್ದಾರ್) ಇವರಿಗೆ 40,000 ರೂ. ಸಂಚಿತ ವೇತನವನ್ನು ಹಾಗೂ ನಿಗದಿಪಡಿಸಿ ಹೊರ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಷರತ್ತುಗಳನ್ನಯ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಅರ್ಹ ಮತ್ತು ಇಚ್ಛೆಯುಳ್ಳ ನಿವೃತ್ತ ಜಿಲ್ಲಾ ನ್ಯಾಯಧೀಶರು ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ನಿವೃತ್ತ ಕಂದಾಯ ಇಲಾಖೆ (ನಿವೃತ್ತ ತಹಶೀಲ್ದಾರ್ /ಉಪ ತಹಶೀಲ್ದಾರ್) ರಿಂದ ಅರ್ಜಿಯನ್ನು ಈ ಅಧಿಸೂಚನೆ ಮೂಲಕ ಆಹ್ವಾನಿಸಲಾಗಿದೆ. ಈ ನೇಮಕಾತಿಯು ನೇಮಕಾತಿ ಆದೇಶದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಉರ್ಜಿತವಾಗಿರುತ್ತದೆ.
ಇಚ್ಛೆಯುಳ್ಳ ನಿವೃತ್ತ ಜಿಲ್ಲಾ ನ್ಯಾಯಧೀಶರು ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ನಿವೃತ್ತ ಕಂದಾಯ ಇಲಾಖೆ (ನಿವೃತ್ತ ತಹಶೀಲ್ದಾರ್ /ಉಪ ತಹಶೀಲ್ದಾರ್) ಅರ್ಜಿಯನ್ನು ಮಾರ್ಚ್ 20ರೊಳಗಾಗಿ ಕಚೇರಿಯ ಸಮಯದೊಳಗಾಗಿ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ಅವಧಿ ಮೀರಿದ ಅರ್ಜಿಗಳನ್ನು ಪುರಸ್ಕರಿಸಲಾಗವುದಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್