
ಗದಗ, 06 ಮಾರ್ಚ್ (ಹಿ.ಸ.)
ಆ್ಯಂಕರ್: ಸಿದ್ಧರಾಮಯ್ಯನವರು ಮಂಡಿಸಿದ ಮುಂಗಡ ಪತ್ರವು ಭೋಗಸ್ ಆಗಿದೆ ಹಾಗು ಅಲ್ಪಸಂಖ್ಯಾತರ ಒಲೈಕೆಯ ಬಜೆಟ್ ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿರವರು ರಾಜ್ಯದ ಬಜೆೆಟ್ ಅನ್ನು ಟೀಕಿಸಿದ್ದಾರೆ.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿದ್ದರು. ಆ ಗ್ಯಾರಂಟಿಗಳನ್ನು ಕೊಡಲು ಸಾವಿರಾರು ಕೋಟಿ ಬೇಕಾಗುತ್ತದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಂಪೂರ್ಣವಾಗಿ ವಿಫಲವಾಗಿದೆ. ಹಾಗು ಈ ಬಜೆಟ್ನಲ್ಲಿ ಸಮಸ್ತ ಹಿಂದೂಗಳಿಗೆ ಅನ್ಯಾಯ ಮಾಡಿ ಅನೇಕ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಈ ಬಜೆಟ್ನಲ್ಲಿ ರೈತರ ದೊಡ್ಡ ಅನ್ಯಾಯ ಮಾಡಿದ್ದಾರೆ.
ಬಜೆಟ್ ನಲ್ಲಿ ಗದಗ ಕ್ಷೇತ್ರಕ್ಕೆ ದೊಡ್ಡ ಅನ್ಯಾಯ ಮಾಡಿದ್ದು ಸಚಿವರಾದ ಎಚ್.ಕೆ.ಪಾಟೀಲರು ಪ್ರಭಾವಿ ಸಚಿವರು ಎಂದು ಹೇಳಿಕೊಳ್ಳುವ ಅವರು ಗದಗ ಕ್ಷೇತ್ರಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಹಾಗು ರಾಜ್ಯದ ಜನರ ನೀರಿಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಬೂದಪ್ಪ ಹಳ್ಳಿರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP