
ಕೊಪ್ಪಳ, 06 ಮಾರ್ಚ್ (ಹಿ.ಸ.):
ಆ್ಯಂಕರ್ : ಕೊಪ್ಪಳ ಜಿಲ್ಲೆಯ 19 ನವೀಕೃತ ಗ್ರೇಡ್-1 ಗ್ರಾಮ ಪಂಚಾಯತಿಗಳ ಗ್ರಾಮ-1 ಕೇಂದ್ರಗಳಲ್ಲಿ ತಲಾ ಒಂದು ಹುದ್ದೆಗೆ ಕಾರ್ಯನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಗ್ರೇಡ್-2 ಯಿಂದ ಗ್ರೇಡ್-1 ನವೀಕರಿಸಲಾದ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ-1 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ
ಸಲುವಾಗಿ ಗಂಗಾವತಿ ತಾಲ್ಲೂಕಿನ ಆನೆಗುಂದಿ ಮತ್ತು ಡಣಾಪುರ, ಕನಕಗಿರಿ ತಾಲ್ಲೂಕಿನ ಚಿಕ್ಕಡನಕನಕಲ್ & ಗೌರಿಪುರ, ಕಾರಟಗಿ ತಾಲ್ಲೂಕಿನ ಚೆಳ್ಳೂರು, ಕೊಪ್ಪಳ ತಾಲ್ಲೂಕಿನ ಬೆಟಗೇರಿ & ಹಾಲವರ್ತಿ, ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ, ಬಾನಾಪುರ, ಇಟಗಿ, ಕುದರಿಮೋತಿ & ಮಸಬಹಂಚಿನಾಳ, ಕುಷ್ಟಗಿ ತಾಲ್ಲೂಕಿನ ದೋಡಿಹಾಳ, ಹನುಮನಾಳ, ಕಂದಕುರ, ಕೇಸೂರು, ಲಿಂಗದಹಳ್ಳಿ & ಮುದೇನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಸೇರಿದಂತೆ ಈ ಎಲ್ಲಾ 19 ಗ್ರಾಮ ಪಂಚಾಯತಿಗಳಲ್ಲಿ ಹೊಸದಾಗಿ ಅಧಿಸೂಚನೆಯನ್ನು ಸರ್ಕಾರವು ಹೊರಡಿಸಿರುತ್ತದೆ.
ಪ್ರಯುಕ್ತ, ಆಯಾ ಗ್ರಾಮ ಪಂಚಾಯತಿಗಳಲ್ಲಿನ ಆಸಕ್ತರು ಗ್ರಾಮ-1 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸಿದ್ದಲ್ಲಿ ಮಾರ್ಚ್ 15 ರೊಳಗೆ ಆನ್ಲೈನ್ https://sevasindhuservices.karnataka.gov.in/loginWindow.do ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಿದ್ದು, ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್