
ವಿಜಯಪುರ, 04 ಮಾರ್ಚ್ (ಹಿ.ಸ.)
ಆ್ಯಂಕರ್ : ನಾಡಿನ ಬಹುತೇಕ ಕಡೆಗಳಲ್ಲಿ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಅದೇ ರೀತಿ ಬಿಸಿಲು ನಾಡು ವಿಜಯಪುರ ಜಿಲ್ಲೆಯಲ್ಲಿ ಕೂಡ ಮಕ್ಕಳು ಬಣ್ಣದ ಓಕುಳಿಯಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದಾರೆ.
ದುಷ್ಟತನದ ಮೇಲೆ ಒಳ್ಳೆಯದು ಜಯಗೊಳ್ಳುವ ಸಂಕೇತಿಸುವ, ಬಣ್ಣಗಳ ಮೂಲಕ ಏಕತೆ, ಪ್ರೀತಿ ಮತ್ತು ಸಮಾನತೆಯನ್ನು ಸಾರುವ ರೋಮಾಂಚಕ ಹಬ್ಬವಾಗಿದೆ.
ಈ ಹಬ್ಬವು ಹಳೆಯ ಕಹಿ ನೆನಪುಗಳನ್ನು ಮರೆತು, ಪರಸ್ಪರ ಬಣ್ಣ ಹಚ್ಚುವ ಮೂಲಕ ಭ್ರಾತೃತ್ವ ಮತ್ತು ಸಹಬಾಳ್ವೆ ಸೂಚಿಸುವುದರ ಜೊತೆಗೆ ಜಾತಿ, ಮತ, ಬಣ್ಣ ಮತ್ತು ಮೇಲು-ಕೀಳು ಎಂಬ ಸಾಮಾಜಿಕ ಅಡೆತಡೆಗಳನ್ನು ಮರೆತು ಎಲ್ಲರೂ ಒಂದಾಗಿ ಬಣ್ಣದಾಟ ಆಡುವ ಮೂಲಕ ಸಾಮರಸ್ಯವನ್ನು ಸಾರುತ್ತದೆ.
ಹೋಳಿ ಹಬ್ಬವು ಹೊಸ ಜೀವನ, ಸಂತೋಷ ಮತ್ತು ಬಣ್ಣಗಳ ಜೀವನವನ್ನು ಆಚರಿಸುವ ಪವಿತ್ರ ಸಂದರ್ಭವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande