ಮಹಾವೀರ ಜಯಂತಿ: ಸಿದ್ದರಾಮಯ್ಯ ನಮನ
ಬೆಂಗಳೂರು, 30 ಮಾರ್ಚ್ (ಹಿ.ಸ.): ಆ್ಯಂಕರ್: ಸತ್ಯ, ಅಹಿಂಸೆ, ಪ್ರೀತಿ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಧರ್ಮದ ವ್ಯಾಖ್ಯಾನ ನೀಡಿದ ಭಗವಾನ್ ಮಹಾವೀರರು ತಾವು ಬೋಧಿಸಿದಂತೆಯೇ ಬದುಕಿ, ಇತರರಿಗೂ ಮಾದರಿಯಾದವರು ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಹಾವೀರ ಜಯಂತಿ ಅಂಗವಾಗಿ ಸಾಮಾಜಿಕ ಮಾಧ್ಯಮ
Cm


ಬೆಂಗಳೂರು, 30 ಮಾರ್ಚ್ (ಹಿ.ಸ.):

ಆ್ಯಂಕರ್:

ಸತ್ಯ, ಅಹಿಂಸೆ, ಪ್ರೀತಿ ಮತ್ತು ಸಹಬಾಳ್ವೆಯ ನೆಲೆಯಲ್ಲಿ ಧರ್ಮದ ವ್ಯಾಖ್ಯಾನ ನೀಡಿದ ಭಗವಾನ್ ಮಹಾವೀರರು ತಾವು ಬೋಧಿಸಿದಂತೆಯೇ ಬದುಕಿ, ಇತರರಿಗೂ ಮಾದರಿಯಾದವರು ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಾವೀರ ಜಯಂತಿ ಅಂಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ಸಂದೇಶ ಹಂಚಿಕೊಂಡಿರುವ ಅವರು, ರಾಜಮನೆತನದಲ್ಲಿ ಜನಿಸಿದರೂ ಲೋಕಕಲ್ಯಾಣಕ್ಕಾಗಿ ಸರ್ವಸ್ವವನ್ನು ತ್ಯಾಗಗೈದು, ಕಠಿಣ ತಪಸ್ಸು, ಧ್ಯಾನದ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ಜ್ಞಾನ ಸಂಪಾದಿಸಿ, ಆ ಮೂಲಕ ಜಗತ್ತಿಗೆ ಬೆಳಕು ನೀಡಿದ ಭಗವಾನ್ ಮಹಾವೀರರ ಜೀವನ - ಬೋಧನೆಗಳನ್ನು ಈ ದಿನ ನೆನೆದು ನಮಿಸುತ್ತೇನೆ ಎಂದು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande