
ಹಳಿಯಾಳ, 30 ಮಾರ್ಚ್ (ಹಿ.ಸ.):
ಆ್ಯಂಕರ್:
ಮಹಾವೀರ ಜಯಂತಿ ಅಂಗವಾಗಿ ಹಳಿಯಾಳ ಪಟ್ಟಣದ ಹವಗಿ ಗ್ರಾಮದ ಜೈನ ಬಸದಿಗೆ ಶಾಸಕ ಆರ್.ವಿ. ದೇಶಪಾಂಡೆ ಭೇಟಿ ನೀಡಿ ವಿಶೇಷ ಪೂಜಾ ಕೈಂಕರ್ಯ ಸೇವೆ ಸಲ್ಲಿಸಿ ಆಶೀರ್ವಾದ ಪಡೆದರು.
ಈ ವೇಳೆ ಅವರು ಮಹಾವೀರರ ಅವರ ತತ್ವ-ಸಂದೇಶಗಳನ್ನು ಸ್ಮರಿಸಿ ಮಾತನಾಡಿದರು. “ಅಹಿಂಸೆಯ ಮಾರ್ಗವನ್ನು ತೋರಿಸಿದ ಮಹಾವೀರರು ಪ್ರತಿಯೊಂದು ಜೀವಿಯಲ್ಲೂ ದೈವಿಕತೆಯನ್ನು ಕಂಡು ಕರುಣೆಯ ಬದುಕಿನ ಮಹತ್ವವನ್ನು ಸಾರಿದರು. ತ್ಯಾಗ, ಧೈರ್ಯ ಮತ್ತು ಪರೋಪಕಾರದ ಜೀವಂತ ಪ್ರತಿರೂಪವಾದ ಅವರ ಜೀವನ ಮಾನವಕುಲಕ್ಕೆ ದಾರಿದೀಪವಾಗಿದೆ,” ಎಂದು ಹೇಳಿದರು.
ಪವಿತ್ರ ದಿನದ ಅಂಗವಾಗಿ ಮಹಾವೀರರ ಆದರ್ಶಗಳನ್ನು ನೆನೆದು ನಮಿಸಿ, ಸರ್ವರ ಜೀವನದಲ್ಲಿ ಸಹಾನುಭೂತಿ, ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa