ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ೨ನೇ ವರ್ಷದ ಸ್ಮರಣೆಯ ಕಾರ್ಯಕ್ರಮ
ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ೨ನೇ ವರ್ಷದ ಸ್ಮರಣೆಯ ಕಾರ್ಯಕ್ರಮ
ಕೋಲಾರ ನಗರ ಕಠಾರಿಪಾಳ್ಯ ಶಾಲಾ ಆವರಣದ ಕನಕ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ರ ಎರಡನೇ ವರ್ಷ ಸ್ಮರಣಾ ಕಾರ್ಯಕ್ರಮ ನಡೆಯಿತು.


ಕೋಲಾರ, ೨೯ ಮಾರ್ಚ್ (ಹಿ.ಸ):

ಆ್ಯಂಕರ್ : ಕೋಲಾರದ ಸೇನಾಧಿಕಾರಿ ದಿವಂಗತ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ನೆನಪಿನಲ್ಲಿ ಪ್ರತಿ ವರ್ಷ ಬ್ಯಾಸ್ಕೆಟ್ ಬಾಲ್ ಟೂರ್ನಿಯನ್ನು ನಡೆಸಬೇಕೆಂದು ನಿವೃತ್ತ ಯೋಧರ ಸಂಘದ ಅಧ್ಯಕ್ಷ ಜಗನ್ ಸಲಹೆ ನೀಡಿದರು.

ನಗರದ ಕಠಾರಿಪಾಳ್ಯ ಶಾಲಾ ಆವರಣದ ಕನಕ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ರ ಎರಡನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋಲಾರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ತನ್ನದೇ ಕನಸುಗಳನ್ನು ಹೊಂದಿದ್ದ ಹಾಗೂ ಉತ್ತಮ ಬ್ಯಾಸ್ಕೆಟ್ಬಾಲ್ ಆಟಗಾರರು ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಜೀವಂತವಾಗಿದ್ದರೆ ಕರ್ನಲ್ ಹುದ್ದೆಗೇರಿ ನಿವೃತ್ತರಾಗುತ್ತಿದ್ದು. ಕೋಲಾರ ಜಿಲ್ಲೆಯ ನಿವೃತ್ತ ಯೋಧರನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಾಗಿರುತ್ತಿದ್ದರು. ಆದರೆ, ಅವರ ಅಕಾಲಿಕ ಮರಣದಿಂದ ಜಿಲ್ಲೆ ಹಾಗೂ ಸಂಘವು ಬಡವಾಗಿದೆ.ತಮ್ಮ ಸಂಘದಿAದ ನಿವೃತ್ತ ಯೋಧರಿಗೆ ನಿವೇಶನವನ್ನು ವೇಮಗಲ್ ಬಳಿ ರೂಪಿಸುತ್ತಿದ್ದು, ಅಮರನಾಥ್ ಕುಟುಂಬದವರು ಇದನ್ನು ಪಡೆದುಕೊಳ್ಳಲು ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಹಾಗೂ ಅಮರನಾಥ್ರ ಹೆಸರನ್ನು ಶಾಶ್ವತವಾಗಿಡಲು ಕಾರ್ಯಕ್ರಮಗಳನ್ನು ರೂಪಿಸಿದರೆ ಸಂಘವು ಜೊತೆಗಿರುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ತಮಗೆ ಬಾಲ್ಯದ ಗೆಳೆಯರಾಗಿದ್ದು, ಕಷ್ಟ ಪಟ್ಟು ಲೆಫ್ಟಿನೆಂಟ್ ಹುದ್ದೆಗೇರಿದ್ದರು. ಆದರೆ, ವಿಧಿ ಅವರನ್ನು ಸೆಳೆದುಕೊಂಡು ಬಂಧು ಮಿತ್ರರನ್ನು ನೋವಿನಲ್ಲಿ ಮುಳುಗುವಂತಾಗಿದೆ, ಕೋಲಾರ ಜಿಲ್ಲೆ ಹಾಗೂ ಕ್ರೀಡಾಭಿವೃದ್ಧಿ ಬಗ್ಗೆ ತಮ್ಮದೇ ಕನಸುಗಳನ್ನು ಇಟ್ಟುಕೊಂಡಿದ್ದ ಅಮರನಾಥ್ ಸ್ಮರಣಾರ್ಥ ಕೋಲಾರದ ಪ್ರಮುಖ ರಸ್ತೆ, ವೃತ್ತ ಹಾಗೂ ಉದ್ಯಾನಕ್ಕೆ ಅವರ ಹೆಸರಿಡಲು ನಗರಸಭೆ ಮುಂದಾಗಬೇಕೆಂದು ಸಲಹೆ ನೀಡಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಯೋಧರಿಗೆ ವೃತ್ತಿಯಲ್ಲಿದ್ದಾಗ ಮಾತ್ರವೇ ಗೌರವ ಸಿಗುತ್ತದೆ, ನಿವೃತ್ತ ರಾದರೆ ಅವರಿಗೆ ಸಿಗಬೇಕಾದ ಗೌರವ, ಸವಲತ್ತುಗಳು ಸಿಗುತ್ತಿಲ್ಲ, ನಿವೇಶನ, ಭೂಮಿ, ಆರೋಗ್ಯ ಸೇವೆಗಾಗಿ ಅವರು ಹೋರಾಟ ನಡೆಸುತ್ತಲೇ ಇದ್ದಾರೆ. ನಿವೃತ್ತ ಯೋಧರ ಹೋರಾಟಕ್ಕೆ ತಮ್ಮ ಬೆಂಬಲ ಇರುತ್ತದೆ. ಕನಕ ಬ್ಯಾಸ್ಕೆಟ್ಬಾಲ್ ತಂಡದ ಕಾರ್ಯದರ್ಶಿ ಅಂಚೆ ಅಶ್ವತ್ಥ್ ಮಾತನಾಡಿ, ಅಂತರಾಷ್ಟಿçÃಯ ಬ್ಯಾಸ್ಕೆಟ್ ಬಾಲ್ ಆಟಗಾರರಾಗಿದ್ದ ಲೆಫ್ಟಿನೆಂಟ್ ಕರ್ನಲ್ ಅಮರನಾಥ್ ಹೆಸರಿನಲ್ಲಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜಿಸುವುದಾಗಿ ಘೋಷಿಸಿದರು.

ಅಮರನಾಥ್ರ ಸಹೋದರಿ ವಿಜಯಲಕ್ಷಿ ಮಾತನಾಡಿ, ಕಷ್ಟ ಪಟ್ಟು ಸೇನೆಯಲ್ಲಿ ಉನ್ನದ ಹುದ್ದೆಗೇರಿದ್ದ ತಮ್ಮ ಸಹೋದರ ಅಕಾಲಿಕವಾಗಿ ಕೊನೆಯುಸಿರೆಳೆದು ತಮ್ಮಕುಟುಂಬವನ್ನು ಅನಾಥರನ್ನಾಗಿಸಿದ್ದಾರೆ, ಅವರು ಆಶಿಸಿದ್ದಂತೆ ಅವರ ನೆನಪಿನಲ್ಲಿ ಕನಕ ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣಕ್ಕೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು.

ಕಾರ್ಯಕ್ರಮವನ್ನು ಲೆಫ್ಟಿನೆಂಟ್ ಕರ್ನಲ್ ಪತ್ನಿ ಜ್ಯೋತಿಶ್ರೀ ದೀಪಬೆಳಗಿಸಿ ಉದ್ಘಾಟಿಸಿದರು. ತಾಯಿ ರತ್ನಮ್ಮ ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು. ಕರಾಟೆ ಪಟುಗಳು, ಕ್ರೀಡಾಪಟುಗಳು, ನಿವೃತ್ತ ಯೋಧರು, ಸೇನಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದ ಅಂಚೆ ಅಶ್ವತ್ಥ್ರನ್ನು ಅಮರನಾಥ್ ಕುಟುಂಬದವರು ಸನ್ಮಾನಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande