
ಕೋಲಾರ,೨೯ ಮಾರ್ಚ್ (ಹಿ.ಸ):
ಆ್ಯಂಕರ್ : ತಾಲೂಕಿನ ಬೆಳಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಎಂ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಭಾಗ್ಯಮ್ಮ ಗೋಪಾಲಪ್ಪ ಆಯ್ಕೆಯಾಗಿದ್ದಾರೆ.
ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಬಿ.ಎಂ ಶ್ರೀನಿವಾಸ್ ೯ ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಬಿ.ಎನ್ ಪ್ರವೀಣ್ ಕುಮಾರ್ ೩ ಮತ ದೇವರಾಜ್ ಹಾಗೂ ವೆಂಕಟಮುನಿಯಪ್ಪ ಅವರ ಬೆಂಬಲಿತ ಅಭ್ಯರ್ಥಿ ವಿರುದ್ಧ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಗೋಪಾಲಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ವೆಂಕಟೇಶ್ ಬಾಬು ಘೋಷಿಸಿದರು.
ಈ ವೇಳೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಿರ್ದೇಶಕರಾದ ಬಿ.ಕೆ ಮುರಳಿಧರ, ಬಿ,ಟಿ ನಾಗರಾಜ್, ಬಿ.ಕೆ ನಾಗೇಶ್, ಬಿ.ಎನ್ ರಾಜಣ್ಣ, ಶಾಂತಮ್ಮ, ಆಂಜಪ್ಪ, ವೆಂಕಟೇಶ್, ಸುಬ್ರಹ್ಮಣ್ಯ ಆಚಾರಿ, ಮುಖಂಡರಾದ ಕೋಟೆ ನಾರಾಯಣಸ್ವಾಮಿ ವಿಟ್ಟಪ್ಪನಹಳ್ಳಿ, ಅರಳಕುಂಟೆ ವೆಂಕಟೇಶಪ್ಪ, ಬೆಳಗಾನಹಳ್ಳಿ ಮಂಜುನಾಥ್ ಬಿಎಂಟಿಸಿ, ತಿಮ್ಮಣ್ಣನವರ ನಂಜುAಡಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಸುರೇಶ್, ಪಕ್ಷದ ಮುಖಂಡರಾದ ಬಿ.ಎಂ ಮುನೇಂದ್ರ, ಬಿ.ಎಂ ರಮೇಶ್, ಹೊಳಲಿ ಚಲಪತಿ, ಮಲ್ಲಂಡಳ್ಳಿ ನಾಗಭೂಷಣ್ಬಾಬು, ಮೇಡಿತಂಬಹಳ್ಳಿ ರಮೇಶ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್