ಉಗ್ರ ಚಟುವಟಿಕೆ : ಆಂಧ್ರ ಪೊಲೀಸರಿಂದ ಬಳ್ಳಾರಿ ವ್ಯಕ್ತಿ ಬಂಧನ
ಬಳ್ಳಾರಿ, 26 ಮಾರ್ಚ್ (ಹಿ.ಸ.): ಆ್ಯಂಕರ್ : ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಶಂಕೆಯ ಮೇಲೆ ಬಳ್ಳಾರಿಯ ಕೌಲ್ಬಜಾರ್ ನಿವಾಸಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ. ಬಂಧಿತ ಆರೋಪಿಯು ಅಬ್ದುಲ್ ಸಲಾಂ (36). ಈತನು ಬಳ್ಳಾರಿಯ ಕೌ
ಉಗ್ರ ಚಟುವಟಿಕೆ : ಆಂಧ್ರ ಪೊಲೀಸರಿಂದ ಬಳ್ಳಾರಿಯಲ್ಲಿ ಬಂಧನ


ಬಳ್ಳಾರಿ, 26 ಮಾರ್ಚ್ (ಹಿ.ಸ.):

ಆ್ಯಂಕರ್ : ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಶಂಕೆಯ ಮೇಲೆ ಬಳ್ಳಾರಿಯ ಕೌಲ್ಬಜಾರ್ ನಿವಾಸಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿ, ಕರೆದುಕೊಂಡು ಹೋಗಿದ್ದಾರೆ.

ಬಂಧಿತ ಆರೋಪಿಯು ಅಬ್ದುಲ್ ಸಲಾಂ (36). ಈತನು ಬಳ್ಳಾರಿಯ ಕೌಲ್ಬಜಾರ್ ನಿವಾಸಿ. ಆಂಧ್ರದಲ್ಲಿ ನಡೆಯುತ್ತಿರುವ ಉಗ್ರವಾದಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ವಿವಿಧ ಮುಖಂಡರುಗಳ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದನು. ಅಲ್ಲದೇ, ಉಗ್ರವಾದದ ಸಾಹಿತ್ಯವನ್ನು ಹಂಚಿಕೆ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande