
ಕೊಪ್ಪಳ, 23 ಮಾರ್ಚ್ (ಹಿ.ಸ.):
ಆ್ಯಂಕರ್ : ಜೆಸ್ಕಾಂ ಕೊಪ್ಪಳ ಉಪ ವಿಭಾಗ ವ್ಯಾಪ್ತಿಯ ಗಿಣಿಗೇರಾ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ 4 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ ಸಂಬಂಧಿಸಿದ ವ್ಯಾಪ್ತಿಯ ಗ್ರಾಮಗಳಲ್ಲಿ ಮಾರ್ಚ್ 24 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಗಿಣಿಗೇರಾ ಉಪ ಕೇಂದ್ರದ ವ್ಯಾಪ್ತಿಯ ಗಿಣಿಗೇರಾ ಮತ್ತು ಗಿಣಿಗೇರಾ ಬೈಪಾಸ್, ಹಳೆ ಕನಕಾಪುರ, ಹೊಸ ಕನಕಾಪುರ, ಕನಕಾಪುರ ತಾಂಡಾ, ಹಿರೇ ಬಗನಾಳ, ಚಿಕ್ಕ ಬಗನಾಳ ಮತ್ತು ಕಾಸನಕಂಡಿ, ಕರ್ಕಿಹಳ್ಳಿ, ಅಲ್ಲಾನಗರ, ಲಾಚನಕೇರಿ, ಕಾಸನಕಂಡಿ, ಕುಣಿಕೇರಿ, ಕುಣಿಕೇರಿ ತಾಂಡಾ, ಅಲ್ಲಾನಗರ, ಕುಟುಗನಹಳ್ಳಿ, ಕಲ್ ತಾವರಗೇರಾ, ಗಬ್ಬೂರು, ಹಾಲಹಳ್ಳಿ, ಭೀಮನೂರು, ಎಫ್3 ಬಗನಾಳ ಎನ್ಜೆವೈ ಫೀಡರ್ ಮತ್ತು ಎಫ್13 ಹಾಲಹಳ್ಳಿ ಎನ್ಜೆವೈ ಫೀಡರ್, ಎಫ್10 ಗಾಳೆಮ್ಮ, ಎಫ್12 ಗಿಣಿಗೇರಾ ಮತ್ತು ಎಫ್11 ಕಲ್ ತಾವರಗೇರಾ ಫೀಡರ್, ಎಫ್7 ಎಸ್.ಆರ್.ಸಿ. ಇಂಡಸ್ಟಿçಯಲ್ ಫೀಡರ್, ಎಫ್33 ಕೋಕಾ ಕೋಲಾ ಇಂಡಸ್ಟ್ರೀಸ್ಗೆ ಸಂಬಂಧಪಟ್ಟ ಎಲ್ಲಾ ಫೀಡರ್ ಹಾಗೂ ಎಫ್1 ಕುಣಿಕೇರಿ ಐಪಿ, ಎಫ್2 ಕರ್ಕಿಹಳ್ಳಿ ಐಪಿ, ಎಫ್5 ಅಲ್ಲಾನಗರ ಐಪಿ, ಎಫ್4 ಪೌಲ್ಟ್ರಿ ಫಾರಂ ಮತ್ತು ಎಫ್6 ಐಪಿ ಕಾಸನಕಂಡಿ, ಪಿ.ಬಿ.ಎಸ್ ಸೋಲಾರ್ ಮತ್ತು ಎಫ್9 ಎನ್ಜೆವೈ ಫೀಡರ್ಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕು.
ನಿಗದಿತ ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಂಡರೆ, ಯಾವುದೇ ಕ್ಷಣದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು, ಗ್ರಾಹಕರು ಯಾವುದೇ ವಿದ್ಯುತ್ ಸಂಬಂಧಿಸಿದ ಕಾಮಗಾರಿಯನ್ನು ನಡೆಸಬಾರದು ಎಂದು ಕೋರಲಾಗಿದೆ. ಒಂದು ವೇಳೆ ಯಾವುದೇ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಾಮಗಾರಿಯನ್ನು ನಡೆಸಿದ ಸಾರ್ವಜನಿಕ, ಗ್ರಾಹಕರೇ ನೇರ ಹೊಣೆಗಾರರಾಗುತ್ತಾರೆ. ಇಂತಹ ವಿದ್ಯುತ್ ಅವಘಡಕ್ಕೆ ಚೆಸ್ಕಾಂ ಯಾವುದೇ ರೀತಿಯಲ್ಲಿ ಜವಾಬ್ದಾರವಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್