
ಗಂಗಾವತಿ, 23 ಮಾರ್ಚ್ (ಹಿ.ಸ.)
ಆ್ಯಂಕರ್ : ನಗರದ ಗಂಗಾವತಿ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ಕ್ಲಬ್ (ರಿ)ವತಿಯಿಂದ ಏಪ್ರೀಲ್ 1 ರಿಂದ ಬೇಸಿಗೆ ಕ್ರಿಕೆಟ್ ಶಿಬಿರ ಆರಂಭಿಸುತ್ತಿದ್ದು 6 ವರ್ಷದಿಂದ 19 ವಯೋಮಿ ಬಾಲಕ ಬಾಲಕಿಯರಿಗು ತರಬೇತಿ ನೀಡಲಾಗುತ್ತಿದ್ದು ಮೇ 30 ರವರೆಗೆ ಒಂದು ತಿಂಗಳು ತರಬೇತುಗೊಳಿಸಲಾಗುತ್ತಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಜಿ. ವೀರಭದ್ರಗೌಡ ತಿಳಿಸಿದ್ದಾರೆ.
ವರ್ಷ ಪೂರ್ಣ ತರಬೇತಿಗು ಆಡ್ಮಿಷನ್ ಪ್ರಾರಂಭಗೊಂಡಿದ್ದು, ಎಲ್ಲಾ ವಿಧದಲ್ಲೂ ತರಬೇತಿ ನೀಡಲಾಗುತ್ತಿದೆ. ಈಗಾಗಲೆ ಸುಮಾರು 300ಕ್ಕೂ ಅಧಿಕ ಕ್ರೀಡಾರ್ಥಿಗಳಿಗೆ ತರಬೇತಿ ನೀಡಲಾಗಿದೆ.
ನಮ್ಮಿಂದ ಕೋಚಿಂಗ್ ಪಡೆದವರು ಉನ್ನತಮಟ್ಟಕ್ಕೇರಿದ್ದು, ಅಸ್ಟ್ರೋ ಟರ್ಫ್ ಮ್ಯಾಚಿಂಗ್ ಪಿಚ್ಚಸ್, ಫ್ಲಡ್ ಲೈಟ್ ಸೀಸನ್, ಬ್ಯಾಟಿಂಗ್, ಬೌಲಿಂಗ್, ವಿಕೇಟ್ ಕೀಪಿಂಗ್, ಫಿಟ್ನೆಸ್ ಕೋಚಿಂಗ್ ವ್ಯವಸ್ಥೆ ಇದ್ದು, ಅಂಡರ್ 14, 16 19 ವಯೋಮಾನದವರಿಗು ವೃತ್ತಿ ನಿರತ ನುರಿತ ತಜ್ಞರಿಂದ ತರಬೇತುಗೊಳಿಸಲಾಗುತ್ತದೆ.
ಆಸಕ್ತರು ನಂದಿ ಬಡಾವಣೆ, ಜಯನಗರ ಸೇಂಟ್ ಪಾಲ್ಸ್ ಸ್ಕೂಲ್ (ಗ್ರೌಂಡ್) ಅಥವಾ 9742814826, 9663074893 ಕ್ಲಬ್ನ ಪ್ರಧಾನ ಕಾರ್ಯದರ್ಶಿ ಜಿ. ವೀರಭದ್ರಗೌಡ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್