
ಕೊಪ್ಪಳ, 23 ಮಾರ್ಚ್ (ಹಿ.ಸ.)
ಆ್ಯಂಕರ್ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ 12ನೇ ಸಮ್ಮೇಳನವು ದಿನಾಂಕ 7, 8, 9, 10 - ಮೇ - 2026 ರಂದು ಕೊಪ್ಪಳದಲ್ಲಿ 4 ದಿನ ಕೊಪ್ಪಳದ ಶ್ರೀ ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ರಂಗಮಂದಿರದಲ್ಲಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಇದರ ನೆನಪಿಗಾಗಿ ಮತ್ತು 15 ವರ್ಷದೊಳಗಿನ ಮಕ್ಕಳಿಗಾಗಿ ಸಾಹಿತ್ಯ ಸ್ಪರ್ಧೆ ನಡೆಯಲಿದೆ.
2005 ರಿಂದ 2025 ರವರೆಗೆ, 15 ವರ್ಷದೊಳಗಿನ ಮಕ್ಕಳು ಬರೆದ, ಯಾವುದೇ ಪ್ರಾಕಾರದ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ಈ ಸ್ಪರ್ಧೆಗೆ ಅರ್ಹ. ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ಸ್ಪರ್ಧೆ ನಡೆಯಲಿದ್ದು, ತಮ್ಮ ಕೃತಿಗಳ 3 ಪ್ರತಿಯೊಂದಿಗೆ, ವಯಸ್ಸಿನ ದಾಖಲೆ ಸಮೇತ ಸಂಪೂರ್ಣ ವಿವರದೊಂದಿಗೆ, 2 ಭಾವಚಿತ್ರದೊಂದಿಗೆ ದಿನಾಂಕ 15-10-2026 ರೊಳಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು. ಆಯ್ಕೆಯಾದ ಮಕ್ಕಳಿಗೆ ಡಿಸೆಂಬರ್ 26-2026ರಲ್ಲಿ ಪ್ರಶಸ್ತಿ ಪ್ರದಾನವಿರುತ್ತದೆ.
ಸಂಸ್ಥೆಯ ವಿಳಾಸ : ಅಧ್ಯಕ್ಷರು, ಮಕ್ಕಳ ಸಾಹಿತ್ಯ ಕೃತಿ ಸ್ಪರ್ಧೆ ವಿಭಾಗ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತ, ಮಂಜುನಾಥನಗರ, ಬೆಂಗಳೂರು-560010. ಮೊ : 9845307327.
ಆಯ್ಕೆಯಾದ ಎಲ್ಲ ಕೃತಿಗಳಿಗೆ, ತಲಾ 2000 ರೂ. ನಗದು ಬಹುಮಾನದೊಂದಿಗೆ, ರಾಜ್ಯಮಟ್ಟದ “ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ”ಯ ಗೌರವವಿರುತ್ತದೆ. ವಿ.ಸೂ. : ಈ ಹಿಂದೆ ನಡೆದ 2005ರ ಸ್ಪಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ಪಡೆದವರು ಕಳುಹಿಸುವಂತಿಲ್ಲ. ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆಯವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್