ಕಾರ್ಪೊರೇಟ್ ಮಿತ್ರ ಕಮಿಟಿ ಸದಸ್ಯರಾಗಿ ಪನ್ನರಾಜ್
ಬಳ್ಳಾರಿ, 23 ಮಾರ್ಚ್ (ಹಿ.ಸ.) ಆ್ಯಂಕರ್: ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಅವರು ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆಯ 2026-27ನೇ ಸಾಲಿನ `ಕಾರ್ಪೊರೇಟ್ ಮಿತ್ರ'' ಕಮಿಟಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಸಿರಿಗೇರಿ ಪನ್ನರಾಜ್ ಅವರು ಬಳ್ಳಾರಿ ಜಿಲ್ಲೆಯನ್ನು 2035ರ
`ಕಾರ್ಪೊರೇಟ್ ಮಿತ್ರ' ಕಮಿಟಿ ಸದಸ್ಯರಾಗಿ ಪನ್ನರಾಜ್


ಬಳ್ಳಾರಿ, 23 ಮಾರ್ಚ್ (ಹಿ.ಸ.)

ಆ್ಯಂಕರ್: ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಅವರು ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆಯ 2026-27ನೇ ಸಾಲಿನ `ಕಾರ್ಪೊರೇಟ್ ಮಿತ್ರ' ಕಮಿಟಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಸಿರಿಗೇರಿ ಪನ್ನರಾಜ್ ಅವರು ಬಳ್ಳಾರಿ ಜಿಲ್ಲೆಯನ್ನು 2035ರ ವೇಳೆಗೆ ದೇಶದಲ್ಲಿ ಸೂಕ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಕ್ಷೇತ್ರದಲ್ಲಿ ಪ್ರಮುಖ ಜಿಲ್ಲೆಯನ್ನಾಗಿ ಗುರುತಿಸುವ ನಿಟ್ಟಿನಲ್ಲಿ ಸಿರಿಗೇರಿ ಪನ್ನರಾಜ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಷಯವನ್ನು ಗಮನಿಸಿ ಅವರನ್ನು ಈ ಕಮಿಟಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಭಾರತೀಯ ಚಾರ್ಟರ್ಡ್ ಅಕೌಂಟಟ್ಸ್ ಸಂಸ್ಥೆಯು ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande