ಕೋಲಾರ-ಬತ್ತಲಹಳ್ಳಿ ಮಾರ್ಗವಾಗಿ ಬಸ್ ಸಂಚಾರ ಆರಂಬಿಸಲು ಒತ್ತಾಯ
ಕೋಲಾರ-ಬತ್ತಲಹಳ್ಳಿ ಮಾರ್ಗವಾಗಿ ಬಸ್ ಸಂಚಾರ ಆರಂಬಿಸಲು ಒತ್ತಾಯ
ಕೋಲಾರ ಬಂಗಾರಪೇಟೆ ಬತ್ತಲಹಳ್ಳಿ ಮಾರ್ಗದ ಬಸ್ ಸಂಚಾರ ಆರಂಭಿಸಲು ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕೋಲಾರ ೨೩ ಮಾರ್ಚ್ (ಹಿ.ಸ) :

ಆ್ಯಂಕರ್:ಕೋಲಾರ-ಬಂಗಾರಪೇಟೆ-ಕಾಮಸಮುದ್ರ-ಬತ್ತಲಹಳ್ಳಿ ಮಾರ್ಗವಾಗಿ ಸ್ಥತಿಗಗೊಳಿಸಿರುವ ಬಸ್ ಸಂಚಾರವನ್ನು ಪುನರಾರಂಭಿಸುವAತೆ ಹಲವು ಗ್ರಾಮಸ್ಥರ ಸಹಿ ಹೊಂದಿರುವ ಮನವಿ ಪತ್ರವನ್ನು ನಿವೃತ್ತ ಎ.ಎಸ್.ಐ. ಅಕ್ಬರ್, ನಿವೃತ್ತ ಎ.ಎಸ್.ಐ. ಗೌರಿಪೇಟೆ ಕೆ.ಎನ್.ರವೀಂದ್ರನಾಥ್, ಶಿಕ್ಷಕಿ ಕವಿತಾ ಮನವಿಯನ್ನು ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಕೋಲಾರ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯ ತಹಶೀಲ್ದಾರ್ ಎಸ್. ಹರಿಪ್ರಸಾದ್ ಮನವಿಯನ್ನು ಸ್ವೀಕರಿಸಿದರು.

ಕೋಲಾರ ಜಿಲ್ಲಾ ಕೇಂದ್ರದಿAದ ಬಂಗಾರಪೇಟೆ, ಕಾಮಸಮುದ್ರ ಮಾರ್ಗವಾಗಿ ಬತ್ತಲಹಳ್ಳಿಗೆ ಸಂಚರಿಸುತ್ತಿದ್ದ ಮಾರ್ಗ ಸಂಖ್ಯೆ ೧೫೩ರ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿದ್ದು, ಹತ್ತಾರು ಹಳ್ಳಿಗಳ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಸ್ ಸಂಪರ್ಕವು ಕೇವಲ ಸಾರಿಗೆ ವ್ಯವಸ್ಥೆಯಾಗಿರದೆ, ಈ ಭಾಗದ ಜನರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡಿರುವುದರಿAದ ಈ ಕೆಳಗಿನ ಸಮಸ್ಯೆಗಳು ಎದುರಾಗಿವೆ. ಶಾಲಾ-ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ವೃದ್ಧರಿಗೆ ಈ ಬಸ್ ಸಂಚಾರ ದೊಡ್ಡ ಆಸರೆಯಾಗಿತ್ತು. ಜಿಲ್ಲಾಡಳಿತ ಕಚೇರಿಗೆ ಕೆಲಸದ ನಿಮಿತ್ತ ಬರುವ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಖಾಸಗಿ ವಾಹನಗಳಿಗೆ ಹೆಚ್ಚಿನ ಹಣ ವ್ಯಯಿಸುವಂತಾಗಿದೆ ಎಂದಿದ್ದಾರೆ.

ಬತ್ತಲಹಳ್ಳಿ, ಕುಂದರಸನಹಳ್ಳಿ, ತೊಪ್ಪನಹಳ್ಳಿ, ದೊಡ್ಡಕಳವಂಚಿ, ಚಿನ್ನಕಾಮನಹಳ್ಳಿ, ಮಿಟ್ಟಹಳ್ಳಿ, ಚಿಕ್ಕಬೊಮ್ಮನಹಳ್ಳಿ, ದೊಡ್ಡಬೊಮ್ಮನಹಳ್ಳಿ, ನೆರ್ನಟ್ಟು, ಕಾಮಸಮುದ್ರ, ಕೇತಗಾನಹಳ್ಳಿ, ಮುದುಗುಳಿ, ಮಾಕಾರನಹಳ್ಳಿ, ಪುತ್ರಸೋಮನಹಳ್ಳಿ, ಪರ್ವನಹಳ್ಳಿ ಹಾಗೂ ವರದಾಪೂರ ಗ್ರಾಮಗಳ ಗ್ರಾಮಸ್ಥರು ಈ ಮನವಿಯಲ್ಲಿ ಸಹಿ ಮಾಡುವ ಮೂಲಕ ಧ್ವನಿಗೂಡಿಸಿದ್ದಾರೆ.

ಸದರಿ ಬಸ್ ಸಂಚಾರದ ಪುನರಾರಂಭಕ್ಕೆ ಕೋರಿ ಜನವರಿ ೧೯ರಂದು ಮೊದಲ ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣ, ಜನವರಿ ೨೮ರಂದು ಗ್ರಾಮಸ್ಥರು ಮತ್ತೊಮ್ಮೆ ಸಂಘಟಿತರಾಗಿ ಕೋಲಾರ ಘಟಕದ ಸಹಾಯಕ ಸಂಚಾರ ಅಧಿಕಾರಿಗಳಾದ ಮುನಿಲಕ್ಷ್ಮಮ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಅದರೂ ಬಸ್ ಸಂಚಾರ ಪ್ರಾರಂಭವಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೆ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅಥವಾ ತಾಂತ್ರಿಕ ಕಾರಣ ನೀಡಿ ಬಸ್ ನಿಲ್ಲಿಸಿರುವುದು ಸರಿಯಲ್ಲ. ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಮಾರ್ಗ ೧೫೩ನ್ನು ಪುನರಾರಂಭಿಸಬೇಕು ಈ ಮೂಲಕ ಸಾರಿಗೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande