ಕೊಪ್ಪಳದಲ್ಲಿ 144 ನೇ ದಿನಕ್ಕೆ ಕಾಲಿಟ್ಟ ಬಲ್ಡೋಟ ವಿರೋಧಿ ಹೋರಾಟ
ಕೊಪ್ಪಳ, 23 ಮಾರ್ಚ್ (ಹಿ.ಸ.) ಆ್ಯಂಕರ್: ನಮ್ಮೂರ ಜನರು ಕೊಪ್ಪಳದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ, ಈಗ ಅದನ್ನು ಬೆಂಗಳೂರಿನ ಜನರಿಗೆ, ಸರಕಾರಕ್ಕೆ ತಲುಪಿಸಲು ಫ್ರೀಡಂ ಪಾಕ್೯ನಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ
ಕೊಪ್ಪಳದಲ್ಲಿ 144 ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಯಶಸ್ವಿ


ಕೊಪ್ಪಳದಲ್ಲಿ 144 ನೇ ದಿನದ ಬಲ್ಡೋಟ ವಿರೋಧಿ ಹೋರಾಟ ಯಶಸ್ವಿ


ಕೊಪ್ಪಳ, 23 ಮಾರ್ಚ್ (ಹಿ.ಸ.)

ಆ್ಯಂಕರ್: ನಮ್ಮೂರ ಜನರು ಕೊಪ್ಪಳದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ, ಈಗ ಅದನ್ನು ಬೆಂಗಳೂರಿನ ಜನರಿಗೆ, ಸರಕಾರಕ್ಕೆ ತಲುಪಿಸಲು ಫ್ರೀಡಂ ಪಾಕ್೯ನಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಮಾಡಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಹೇಳಿದರು.

ಅವರು ನಗರಸಭೆ ಮುಂದೆ ನಡೆಯುತ್ತಿರುವ ಬಲ್ಡೋಟ ಕಾರ್ಖಾನೆ ವಿರೋಧಿ 144ನೇ ದಿನದ ಹೋರಾಟದಲ್ಲಿ ಮಾತನಾಡಿದರು.

ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಮೂಲಕ ಹಮ್ಮಿಕೊಂಡಿರುವ ಹೋರಾಟ ಜನಸಾಮಾನ್ಯರ ಹೋರಾಟವಾಗಿದ್ದು, ಇದನ್ನು ಎಲ್ಲಾ ಸರಕಾರಗಳು ಪರಿಗಣಿಸಬೇಕು, 20 ಬಾಧಿತ ಗ್ರಾಮಗಳು ಸೇರಿದಂತೆ ಕೊಪ್ಪಳ ಭಾಗ್ಯನಗರದ 1.5 ಲಕ್ಷ ಜನರಿಗೆ ಸಮಸ್ಯೆ ಆಗಿದೆ, ಈಗಾಗಲೇ ಇಲ್ಲಿನ ಪರಿಸರ, ನೀರು ಹಾಳಾಗಿದ್ದು, ಆರೋಗ್ಯದ ಮೇಲೆ, ನಮ್ಮ ಮಕ್ಕಳ ತ್ವಚೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇಲ್ಲಿ ನಿರಂತರ ಹೋರಾಟ ಮಾಡುವ ಜೊತೆಯಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಹೋರಾಟ ಮಾಡಿದ್ದು ಈಗ ಬೆಂಗಳೂರಲ್ಲಿ ಹೋರಾಟ ಮಾಡಿದ್ದಾರೆ, ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ, ಜನರಿಗೆ ಮುಕ್ತಿ ಸಿಗಬೇಕು, ಜನಪರ ರೈತಪರ ಸಿದ್ದರಾಮಯ್ಯ ಅವರ ಸರಕಾರ ನಮ್ಮ ಮನವಿಯನ್ನೂ ಪರಿಗಣಿಸಿ, ದೇವನಹಳ್ಳಿ ಭೂಮಿ ರೈತರಿಗೆ ಬಿಟ್ಟು ಕೊಟ್ಟ ಹಾಗೆ ಇಲ್ಲಿಯೂ ಅಂತಹ ಕ್ರಮ ತೆಗೆಸುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಹಿಳಾ ನಾಯಕಿ ಕಾವ್ಯ ಪ್ರಸನ್ನ ಗಡಾದ, ನಿವೃತ್ತ ಪ್ರಾಂಶುಪಾಲ ಬಿ. ಜಿ. ಕರಿಗಾರ, ಮುಖಂಡರುಗಳಾದ ಶಿವಪುತ್ರಪ್ಪ ಕವಡಿಮಟ್ಟಿ, ಮಹಾಂತೇಶ ಕೊತಬಾಳ, ರಾಜಶೇಖರ ಏಳುಬಾವಿ, ನಗರ ಆಶ್ರಯ ಸಮಿತಿ ಸದಸ್ಯ ಶ್ರೀನಿವಾಸ ಪಂಡಿತ, ಪಂಪಣ್ಣ ಚಿಲಕಮುಖಿ ಇತರರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande