

ವಿಜಯಪುರ, 18 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವವು ಮಾರ್ಚ್ 19ರಿಂದ 23ರವರೆಗೆ ಸಡಗರ ಸಂಭ್ರಮದಿಂದ ನಡೆಯಲಿದ್ದು, ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 19ರಂದು ಬೆಳಗ್ಗೆ 8 ಗಂಟೆಗೆ ಜಾನುವಾರು ಜಾತ್ರೆಗೆ ಬಬಲಾದಿ-ಚಮಕೇರಿ-ಕತಕನಹಳ್ಳಿಯ ಶಿವಯ್ಯ ಸ್ವಾಮೀಜಿ ಚಾಲನೆ ನೀಡುವರು. ಬಳಿಕ ಬೆಳಗ್ಗೆ 10.30ಕ್ಕೆ ಕೃಷಿ ಮೇಳ ಉದ್ಘಾಟನೆ, ಮಧ್ಯಾಹ್ನ 4ಕ್ಕೆ ಕೆಸರಿನಲ್ಲಿ ಮನುಷ್ಯರ ಓಟದ ಸ್ಪರ್ಧೆ ಮತ್ತು ಸಂಜೆ 7ಕ್ಕೆ ಜ್ಞಾನ ದೀಪೋತ್ಸವ ಜರುಗಲಿದೆ.
ಮಾರ್ಚ್ 20ರಂದು ಬೆಳಗ್ಗೆ 8ಕ್ಕೆ ಗದ್ದುಗೆಯಲ್ಲಿ ರುದ್ರಾಭೀಷೇಕ ಮತ್ತು ಕುಂಭಾಭೀಷೇಕ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಚಾಣಕ್ಯ ಕರಿಯರ್ ಅಕಾಡೆಮಿ ನೇತೃತ್ವದಲ್ಲಿ ರಸಪ್ರಶ್ನೆ ಸ್ಪರ್ಧೆ, ಸಂಜೆ 7.30ಕ್ಕೆ ಪುರಾಣ ಪ್ರವಚನ ಮಂಗಲ ಹಾಗೂ ರಾತ್ರಿ 9ಕ್ಕೆ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 21ರಂದು ಬೆಳಗ್ಗೆ 7ಕ್ಕೆ ಪಲ್ಲಕ್ಕಿ ಉತ್ಸವ, 8ಕ್ಕೆ ಉಡಿ ತುಂಬುವ ಕಾರ್ಯಕ್ರಮ, 9.30ಕ್ಕೆ ಕೌಡಿ ಜಾತ್ರೆ, 10ಕ್ಕೆ ಆರೋಗ್ಯ ಉಚಿತ ಮೇಳ, 10.30ಕ್ಕೆ ಆರೇತ್ತಿನ ನೇಗಿಲು ಜಗ್ಗುವ ಸ್ಪರ್ಧೆ, ಸಂಜೆ 7ಕ್ಕೆ ರಥೋತ್ಸವ ಹಾಗೂ ರಾತ್ರಿ 9ಕ್ಕೆ ಶ್ರೀ ಕೃಷ್ಣ ಪಾರಿಜಾತ ಕಾರ್ಯಕ್ರಮ ಜರುಗಲಿದೆ.
ಮಾರ್ಚ್ 22ರಂದು ಬೆಳಗ್ಗೆ 10ಕ್ಕೆ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ, 11ಕ್ಕೆ ಸರಳ ಸಾಮೂಹಿಕ ವಿವಾಹ, ಮಧ್ಯಾಹ್ನ 1ಕ್ಕೆ ಮಹಾಪ್ರಸಾದ ವಿತರಣೆ ಹಾಗೂ ರಾತ್ರಿ 8ಕ್ಕೆ ನಗೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 23ರಂದು ಬೆಳಗ್ಗೆ 1ಕ್ಕೆ ಭಾರ ಎತ್ತುವ ಸ್ಪರ್ಧೆ, ಸಂಜೆ ಜಂಗಿ ಕುಸ್ತಿ, ಸಂಜೆ 7ಕ್ಕೆ ಜಾನುವಾರು ಜಾತ್ರೆಯ ಪ್ರಶಸ್ತಿ ಹಾಗೂ ಬಹುಮಾನ ವಿತರಣೆ ನಡೆಯಲಿದ್ದು, ಬಳಿಕ ರಾತ್ರಿ 8ಕ್ಕೆ ಚಿತ್ತಾಕರ್ಷಕ ಮದ್ದು ಸುಡುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಮಾರೋಪಗೊಳ್ಳಲಿದೆ ಎಂದು ಜಾತ್ರಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande