ಸಿದ್ದು ಬಜೆಟ್ನಲ್ಲಿ `ವಿಶೇಷ ಚೇತನ'ರ `ಒಂದು ಪದ'ವೂ ಇಲ್ಲ : ವೈ.ಎಂ. ಸತೀಶ್
ಬೆಂಗಳೂರು, , 18 ಮಾರ್ಚ್ (ಹಿ.ಸ.) ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17ನೇ ಬಜೆಟ್ ಸಂಪೂರ್ಣ ನಿರಾಶೆಯಿಂದ ಕೂಡಿದ್ದು, ಬಳ್ಳಾರಿ - ವಿಜಯನಗರ ಜಿಲ್ಲೆ ಮತ್ತು ವಿಶೇಷ ಚೇತನರ ಪರ ಬಜೆಟ್ನಲ್ಲಿ `ಒಂದು ಪದ''ವೂ ಪ್ರಸ್ತಾಪವಾಗಿಲ್ಲ ಎಂದು ಶಾಸಕರಾದ ವೈ.ಎಂ. ಸತೀಶ್ ಅವರು ತೀವ್ರ ಅಸಮಾಧಾನ ವ್ಯಕ್
There is not a single word of 'special spirit': Y.M. Satish


ಬೆಂಗಳೂರು, , 18 ಮಾರ್ಚ್ (ಹಿ.ಸ.)

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 17ನೇ ಬಜೆಟ್ ಸಂಪೂರ್ಣ ನಿರಾಶೆಯಿಂದ ಕೂಡಿದ್ದು, ಬಳ್ಳಾರಿ - ವಿಜಯನಗರ ಜಿಲ್ಲೆ ಮತ್ತು ವಿಶೇಷ ಚೇತನರ ಪರ ಬಜೆಟ್ನಲ್ಲಿ `ಒಂದು ಪದ'ವೂ ಪ್ರಸ್ತಾಪವಾಗಿಲ್ಲ ಎಂದು ಶಾಸಕರಾದ ವೈ.ಎಂ. ಸತೀಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಜೆಟ್ ಮೇಲಿನ ಅನುದಾನದ ಮೇಲೆ ಮಾತನಾಡಿದ ಅವರು, ಕೆಎಂಇಆರ್ಸಿ, ಕೆಕೆಆರ್ಡಿಬಿ ಅನುದಾನದ ಬಗ್ಗೆ ಹೇಳುತ್ತಾರೆ. ಕೆಕೆಆರ್ಡಿಬಿ ಅನುದಾನ ಯಾವಾಗ ಬರುತ್ತದೆ, ಹೇಗೆ ಬಳಕೆ ಆಗುತ್ತಿದೆ. ಯಾರಿಗೆ ಅನುದಾನ ಬಿಡುಗಡೆ ಆಗುತ್ತಿದೆ ಎನ್ನುವ ವಿಷಯದಲ್ಲಿ ಸ್ಪಷ್ಟತೆಯೇ ಇಲ್ಲವಾಗಿದೆ. ಆದರೆ, ಬಳ್ಳಾರಿ - ವಿಜಯನಗರ ಜಿಲ್ಲೆಗೆ ಬಜೆಟ್ನಲ್ಲಿ ಒಂದಿಷ್ಟೂ ಅನುದಾನವಿಲ್ಲವಾಗಿದೆ ಇದು ಈ ಸರ್ಕಾರದ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದರು.

ಭ್ರಷ್ಟಾಚಾರ ಎಸಗಿ, ಸಿಕ್ಕಿ ಹಾಕಿಕೊಳ್ಳುವ ಕರ್ನಾಟಕ ಸರ್ಕಾರಿ ಆರೋಪಿತ ಅಧಿಕಾರಿಗಳ ವಿರುದ್ಧದ ಪ್ರಕರಗಳ ತ್ವರಿತ ವಿಚಾರಣೆ ಮತ್ತು ಇತ್ಯರ್ಥಕ್ಕೆ ಜಿಲ್ಲೆಗೊಂದು ಫಾಸ್ಟ್ಟ್ರ್ಯಾಕ್ ಕೋರ್ಟ್ ಪ್ರಾರಂಭಿಸಲು ಮನವಿ ಮಾಡಿದ್ದೆ. ಆದರೆ, ಕಾನೂನು ಮತ್ತು ಯೋಜನಾ ಇಲಾಖೆಯಿಂದ ಬಜೆಟ್ನಲ್ಲಿ ಈ ವಿಷಯ ಪ್ರಸ್ತಾಪ ಆಗಿಲ್ಲದಿರುವುದು

ನಿರಾಶಾದಾಯಕವಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷ ಚೇತನರ ಜೀವನಕ್ಕೆ ಅನುಕೂಲವಾಗುವ ಕನಿಷ್ಠ ಪದವೂ ಬಜೆಟ್ನಲ್ಲಿ ಬಳಕೆಯಾಗಿಲ್ಲ. ವಿಶೇಷ ಚೇತನರ ಪೆನ್ಶನ್ ಹೆಚ್ಚಳ, ಸೌಲಭ್ಯಗಳ ಹೆಚ್ಚಳ, ಇಲಾಖೆಗೆ ಹೆಚ್ಚಿನ ಅನುದಾನ ನೀಡುವಿಕೆ ಇನ್ನಿತರೆಗಳ ಕುರಿತು ಇಡೀ ಬಜೆಟ್ನಲ್ಲಿ ಎಲ್ಲೂ ಪ್ರಸ್ತಾಪವಾಗಿಲ್ಲ. ರಾಜ್ಯದಲ್ಲಿ ಆಸಿಡ್ ಸಂತ್ರಸ್ತರು 150 ಜನರಿರಬಹುದು. 2011 ರ ಸೆನ್ಸಸ್ ಪ್ರಕಾರ 1.80 ವಿಶೇಷ ಚೇತನರಿದ್ದಾರೆ. ಈ ಸಂಖ್ಯೆಯನ್ನು ಬಜೆಟ್ನಲ್ಲಿ ಮರೆತಿದ್ದು, ಈ ಬಜೆಟ್ `ದೊಡ್ಡ ಸೊನ್ನೆ, ಶೂನ್ಯ' ಎಂದು ನೋವನ್ನು ವ್ಯಕ್ತಪಡಿಸಿದರು.

ಕಡಿಮೆ ದೃಷ್ಠಿ ಅಥವಾ ಅಂಧರ ಸ್ವಾವಲಂಭನಾ ಜೀವನಕ್ಕೆ ನೆರವಾಗುವಲ್ಲಿ ರೇಬಾನ್ ಕಂಪನಿಯು ಬಿಡುಗಡೆ

ಮಾಡಿರುವ `ಮೆಟಾ ಗ್ಲಾಸ್' ಬಳಕೆ ಮಾಡಿದಲ್ಲಿ ದೃಷ್ಟಿಹೀನರ ಜೀವನಶೈಲಿಯನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸಲಿದೆ. ಕಳೆದ ವರ್ಷದ ಬಜೆಟ್ನಲ್ಲಿ ಇಡೀ ರಾಜ್ಯಕ್ಕೇ ಕೇವಲ 20 ಕೋಟಿಗಿಂತಲೂ ಕಡಿಮೆ ಅನುದಾನವನ್ನು ನೀಡಿದೆ. ವಿಶೇಷ ಚೇತನರ ವಿಚಾರದಲ್ಲಿ ಈಬಾರಿಯ ಬಜೆಟ್ ಶೂನ್ಯವನ್ನು ನೀಡಿದೆ ಎಂದರು.

ವಿಶೇಷ ಚೇತನರ ಕುರಿತು ಬಜೆಟ್ನಲ್ಲಿ ವಿಷಯ ಪ್ರಸ್ತಾಪಿಸದೇ ನಾವೆಲ್ಲರೂ ಅವರನ್ನು ಕೀಳಾಗಿ ನೋಡುತ್ತಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲರೂ ಮಾನವೀಯತೆಯನ್ನು ಕಳೆದುಕೊಂಡಿದ್ದೇವೆ. ವಿಶೇಷ ಚೇತನರಿಗೆ ಹೆಚ್ಚಿನ ಅನುದಾನ ನೀಡಿ, ಅವರ ಜೀವನಶೈಲಿಯನ್ನು ಸುಧಾರಿಸಲು ನಾವೆಲ್ಲರೂ ಪ್ರಯತ್ನಿಸೋಣ. ಈ ನೆರವನ್ನೂ ನಾವುಗಳು ಮಾಡದಿದ್ದಲ್ಲಿ, ಇಲ್ಲಿರಲು ನಾವೆಲ್ಲರೂ ಅರ್ಹರಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದರು.

ವಿಶೇಷ ಚೇತನರ ಹಿತಾಸಕ್ತಿಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆಗೆ ಪ್ರಾಮಾಣಿಕವಾಗಿ ಹಾಜರಾಗಿರಿ. ಪದೇ ಪದೇ ಪ್ರಕರಣದ ಅಡ್ಜರ್ನ್ಮೆಂಟ್ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande