
ವಿಜಯಪುರ, 18 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರನಾಳ-ಧೂಳಖೇಡ ರಸ್ತೆಗೆ ಖಾಸಗಿ ವ್ಯಕ್ತಿಗಳು ಅಡ್ಡಲಾಗಿ ಹಾಕಿರುವ ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಶಿರನಾಳ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಕಳೆದ 15 ವರ್ಷಗಳಿಂದ ಡಾಂಬರೀಕರಣ ರಸ್ತೆ ಸೌಲಭ್ಯ ದೊರಕಿಲ್ಲ. ಇದೀಗ ರಸ್ತೆ ಕಾಮಗಾರಿ ಮಂಜೂರಾದರೂ, ಕೆಲವರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದರಿಂದ ತಕ್ಷಣವೇ ಸಮಸ್ಯೆ ಬಗೆಹರಿಸಿ ಕಾಮಗಾರಿ ಮುಂದುವರಿಸಿ ರಸ್ತೆ ಡಾಂಬರೀಕರಣ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಇಲ್ಲವಾದರೆ ಮುಂದಿನ 2-3 ದಿನಗಳಲ್ಲಿ ರಸ್ತೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಮನವಿ ಸಲ್ಲಿಸುವ ವೇಳೆ ಕಲ್ಲಪ್ಪ ಗುಮತೆ, ಸಿದ್ದರಾಮ ಕುಂಬಾರಿ, ನಾಗೇಂದ್ರ ಸವಳಸಂಗ, ಮಲ್ಲಿಕಾರ್ಜುನ ವಾಲಿಕಾರ, ರೇವಣ್ಣಸಿದ್ದ ಶಿವಶರಣ, ಭೀಮರಾವ ಶಿವಶರಣ, ಬಸವರಾಜ ಶಿವಶರಣ, ಯಾಬಣ್ಣ ರಗಟೆ, ಕುಮಾರ ಕೋಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande