
ಗದಗ, 18 ಮಾರ್ಚ್ (ಹಿ.ಸ.)
ಆ್ಯಂಕರ್:
ಗದಗ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸುವುದೇನೆಂದರೆ 2026ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ -1 ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಗದಗ ರವರ ವತಿಯಿಂದ ಪ್ರತಿ ತಾಲೂಕು ಮಟ್ಟದಲ್ಲಿ ಈ ಕೆಳಕಂಡಂತೆ ಪ್ರೋತ್ಸಾಹಧನ ನೀಡುವುದಾಗಿ ಸ್ವತಃ ತಾವೇ ವಾಗ್ದಾನ ಮಾಡಿರುತ್ತಾರೆ.
ತಾಲೂಕು ಮಟ್ಟದ ಬಹುಮಾನ ವಿವರಗಳು:
ಪ್ರಥಮ ಸ್ಥಾನ ಪಡೆದ ಒಬ್ಬ ವಿದ್ಯಾರ್ಥಿಗೆ ₹ 10,000/- ರಂತೆ ಒಟ್ಟು ಜಿಲ್ಲೆಗೆ ₹ 60,000/-
ದ್ವಿತೀಯ ಸ್ಥಾನ ಪಡೆದ ತಲಾ 3 ವಿದ್ಯಾರ್ಥಿಗಳಿಗೆ ತಲಾ ₹ 5,000/- ಒಟ್ಟು ಜಿಲ್ಲೆಗೆ ₹ 90,000/-
ತೃತೀಯ 6 ಸ್ಥಾನಗಳ ವಿದ್ಯಾರ್ಥಿಗಳಿಗೆ ತಲಾ ₹ 2,500/- ಒಟ್ಟು ಜಿಲ್ಲೆಗೆ ₹ 90,000/-
ಪ್ರತಿ ತಾಲೂಕಿಗೆ ₹ 40,000/- ರಂತೆ ಪ್ರೋತ್ಸಾಹಧನ ವಿತರಣೆ ಆಗಲಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಒಳಗೊಂಡು ಒಟ್ಟು ₹2,40,000/- ಅನುದಾನ ನೀಡುವುದಾಗಿ ವಾಗ್ದಾನ ಮಾಡಿರುತ್ತಾರೆ.
ಇದಲ್ಲದೆ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸರ್ಕಾರಿ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಗೆ, ಮೊಹಮ್ಮದ ಸಾಧಿಕ್ ಖಾಜಿ, ಆಡಳಿತಾಧಿಕಾರಿಗಳು, ಅಲಿ ಪಬ್ಲಿಕ್ ಶಾಲೆ ಗದಗ ಇವರಿಂದ ₹ 10,000/- ವಿಶೇಷ ಬಹುಮಾನ ನೀಡುವುದಾಗಿ ಇವರು ಕೂಡಾ ವಾಗ್ದಾನ ಮಾಡಿರುತ್ತಾರೆ.
ಪ್ರಯುಕ್ತ ಜಿಲ್ಲೆಯ ಎಲ್ಲ ಎಸ್.ಎಸ್.ಎಲ್.ಸಿ. ಮಕ್ಕಳು ಹೆಚ್ಚಿನ ಗುಣಮಟ್ಟದ ಫಲಿತಾಂಶ ದೊರೆಯುವಲ್ಲಿ ಪ್ರಾಮಾಣಿವಾಗಿ ಪ್ರಯತ್ನ ತಮ್ಮದಾಗಲಿ ಎಂದು ಹಾಗೂ ಪ್ರೋತ್ಸಾಹಧನ ನೀಡುವುದಾಗಿ ವಾಗ್ದಾನ ಮಾಡಿದ ಸಂಸ್ಥೆಯರಿಗೆ ಮಕ್ಕಳ ಹಾಗೂ ಜಿಲ್ಲೆಯ ಎಲ್ಲ ಅಧಿಕಾರಿಗಳ ಪರವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ( ಆಡಳಿತ) ಇವರು ಕೃತಜ್ಞತೆ ಸಲ್ಲಿಸಿರುತ್ತಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP