250 ಬಡ ಮುಸ್ಲಿಂ ಕುಟುಂಬಗಳಿಗೆ ರಂಜಾನ್ ಕಿಟ್-ಬೆಳ್ಳೊಳ್ಳಿ ವ್ಯಾಪಾರಸ್ಥನ ಮಾನವೀಯತೆಗೆ ಮೆಚ್ಚುಗೆ
ಬಾಗಲಕೋಟೆ, 18 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ಬಳ್ಳೊಳ್ಳಿ ಸಗಟು ವ್ಯಾಪಾರಸ್ಥರಾದ ರಫೀಕ ಗುಳೇದಗುಡ್ಡ ಅವರು ರಂಜಾನ್ ಹಬ್ಬದ ಪ್ರಯುಕ್ತ 250 ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಿದರು. ರಂಜಾನ್ ತಿಂಗಳ ಪವಿತ್ರ ಸಂದರ್ಭದಲ್ಲಿ ಅಗತ್ಯ ವಸ್ತುಗಳ
ರಂಜಾನ್


ಬಾಗಲಕೋಟೆ, 18 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ಬಳ್ಳೊಳ್ಳಿ ಸಗಟು ವ್ಯಾಪಾರಸ್ಥರಾದ ರಫೀಕ ಗುಳೇದಗುಡ್ಡ ಅವರು ರಂಜಾನ್ ಹಬ್ಬದ ಪ್ರಯುಕ್ತ 250 ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಿಸಿದರು.

ರಂಜಾನ್ ತಿಂಗಳ ಪವಿತ್ರ ಸಂದರ್ಭದಲ್ಲಿ ಅಗತ್ಯ ವಸ್ತುಗಳನ್ನು ಒಳಗೊಂಡ ಕಿಟ್ಗಳನ್ನು ವಿತರಿಸುವ ಮೂಲಕ ಅವರು ಮಾನವೀಯತೆ ಮತ್ತು ಸಾಮಾಜಿಕ ಕಳಕಳಿ ಮೆರೆದರು. ಈ ಕಾರ್ಯಕ್ರಮವನ್ನು ಸಮಾಜದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಂಜುಮನ್-ಎ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನ ಡೋಂಗ್ರಿ ಮಹಾಲಿಂಗಾಪುರ, ಮುಸ್ಲಿಂ ಸಮಾಜದ ಮುಖಂಡರಾದ ಸೈಯದ್ ಇಂಗಳಗಿ, ನಬಿಸಾಬ್ ಇಂಗಳಗಿ, ಸುಲ್ತಾನ್ ಕಲಾದಗಿ, ಬಾಪು ಬಾದಾಮಿ, ಗೈಬು ಜಮಖಂಡಿ, ಅಬೂಬಕರ್ ಬಂಟನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande