`ಮ್ಯಾಟ್ಲ್ಯಾಬ್ ಮತ್ತು ಸಿಮ್ಯುಲಿಂಕ್’ ಮೂರು ದಿನಗಳ ಕಾರ್ಯಾಗಾರ
ಬಳ್ಳಾರಿ, 16 ಮಾರ್ಚ್ (ಹಿ.ಸ.) ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ `ಮ್ಯಾಟ್ಲ್ಯಾಬ್ ಮತ್ತು ಸಿಮ್ಯುಲಿಂಕ್’ ವಿಷಯದ ಕುರಿತು ಮೂರು ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಾಗಾರ ಸೋಮವಾರದಿಂದ ಪ್ರಾರಂಭವಾಯಿತು.
`MATLAB and Simulink’ Three-day workshop


`MATLAB and Simulink’ Three-day workshop


`MATLAB and Simulink’ Three-day workshop


ಬಳ್ಳಾರಿ, 16 ಮಾರ್ಚ್ (ಹಿ.ಸ.)

ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ `ಮ್ಯಾಟ್ಲ್ಯಾಬ್ ಮತ್ತು ಸಿಮ್ಯುಲಿಂಕ್’ ವಿಷಯದ ಕುರಿತು ಮೂರು ದಿನಗಳ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಾಗಾರ ಸೋಮವಾರದಿಂದ ಪ್ರಾರಂಭವಾಯಿತು.

ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಇಇಇ ವಿಭಾಗದ ಮುಖ್ಯಸ್ಥ ಡಾ. ಎಸ್. ಕೊಟ್ರೇಶ್ ಅವರು, ವಿದ್ಯುತ್ ಚಾಲಿತ ವಾಹನಗಳ ಬಳಕೆ ದಿನೇ ದಿನೇ ಹೆಚ್ಚುತ್ತಿದೆ. ಇವಿಗಳ ಬಳಕೆಯಿಂದಾಗಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. 2070ರವೇಳೆಗೆ ಇವಿ ವಾಹನಗಳ ಬಳಕೆ ಹೆಚ್ಚಾಗಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಒಳ್ಳೆಯ ಪ್ರಭಾವ ಬೀರಲಿದೆ ಎಂದರು.

ಅಬೆಯಾಂಟ್ರಿಕ್ಸ್ ಎಡುಸಾಫ್ಟ್ನ ಸಂಪನ್ಮೂಲ ವ್ಯಕ್ತಿ ಶಿವರಾಜ್ ವಿ.ಎಸ್ ಅವರು, ಇವಿ ವ್ಯವಸ್ಥೆಗಳಿಗೆ ವಿದ್ಯುತ್ ಎಲೆಕ್ಟ್ರಾನಿಕ್ ಪರಿವರ್ತಕಗಳು ನಿರ್ಣಾಯಕವಾಗಿವೆ. ಬ್ಯಾಟರಿ, ಮೋಟಾರ್ ಮತ್ತು ಪೂರಕ ಘಟಕಗಳ ನಡುವೆ ಪರಿಣಾಮಕಾರಿ ಶಕ್ತಿ ನಿರ್ವಹಣೆ ಮತ್ತು ಪರಿವರ್ತನೆಯನ್ನು ಸಕ್ರಿಯಗೊಳಿಸುತ್ತವೆ. ಈ ಹಂತದಲ್ಲಿ ತಂತ್ರಜ್ಞಾನ ಮತ್ತು ತಾಂತ್ರಿಕ ವ್ಯವಸ್ಥೆ ಕ್ರಮೇಣ ಅಭಿವೃದ್ಧಿ ಹೊಂದುತ್ತಲೇ ಇರುತ್ತದೆ ಎಂದರು.

ಕಾರ್ಯಾಗಾರದ ಸಂಯೋಜಕರಾದ ಶಾಂತಕುಮಾರ್ ಇನ್ನಿತರರು ವೇದಿಕೆಯಲ್ಲಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande