ಕೊಪ್ಪಳ : ಲೋಕ ಅದಾಲತ್ನಲ್ಲಿ 49,953 ಪ್ರಕರಣಗಳ ಇತ್ಯರ್ಥ
ಕೊಪ್ಪಳ, 16 ಮಾರ್ಚ್ (ಹಿ.ಸ.) ಆ್ಯಂಕರ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಸಂದರ್ಭದಲ್ಲಿ ಒಟ್
ಕೊಪ್ಪಳ : ಲೋಕ ಅದಾಲತ್ನಲ್ಲಿ 49,953 ಪ್ರಕರಣಗಳ ಇತ್ಯರ್ಥ


ಕೊಪ್ಪಳ, 16 ಮಾರ್ಚ್ (ಹಿ.ಸ.)

ಆ್ಯಂಕರ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ.

ಈ ಸಂದರ್ಭದಲ್ಲಿ ಒಟ್ಟು 7 ಪ್ರಕರಣಗಳಲ್ಲಿ ಗಂಡ-ಹೆಂಡತಿಯರು ತಮ್ಮ ಮನಸ್ತಾಪವನ್ನು ಬಿಟ್ಟು, ಮಧ್ಯಸ್ಥಿಕೆಗಾರರು, ವಕೀಲರು ಹಾಗೂ ನ್ಯಾಯಾಧೀಶರು ನೀಡಿದ ಸೂಕ್ತ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಮತ್ತೆ ಒಟ್ಟಿಗೆ ಬಾಳು ನಡೆಸಲು ಒಪ್ಪಿಕೊಂಡಿರುವುದು ವಿಶೇಷವಾಗಿತ್ತು.

ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ-ಮರಣ, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ರೀತಿಯ ಒಟ್ಟು 5123 ಪ್ರಕರಣಗಳ ಪೈಕಿ 3032 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಇದೇ ವೇಳೆ ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 52,194 ಪ್ರಕರಣಗಳ ಪೈಕಿ 46,921 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 3,21,81,082 ರೂ. ಆಗಿದೆ.

ಒಟ್ಟಾರೆ ಒಂದೇ ದಿನದಲ್ಲಿ ನಡೆದ ಈ ಲೋಕ ಅದಾಲತ್ನಲ್ಲಿ ಒಟ್ಟು 57,316 ಪ್ರಕರಣಗಳ ಪೈಕಿ 49,953 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 44,44,49,017 ರೂ. ಆಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande