
ವಿಜಯಪುರ, 16 ಮಾರ್ಚ್ (ಹಿ.ಸ.)
ಆ್ಯಂಕರ್ : ಏಪ್ರಿಲ್ 10ರಿಂದ 14ರವರೆಗೆ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಬುದ್ಧ–ಬಸವ–ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳಕ್ಕಾಗಿ ವಿಜಯಪುರ ನಗರ ಅಗ್ಗದ ದರದ ಕಾಳಿನ ಅಂಗಡಿಕಾರರ ಸಂಘದ ವತಿಯಿಂದ ₹10,000 ದೇಣಿಗೆ ನೀಡಿದರು ಎಂದು ಆಯೋಜಕ-ಪತ್ರಕರ್ತ ಅನೀಲ್ ಹೊಸಮನಿ ತಿಳಿಸಿದರು.
ಸಂಘದ ಅಧ್ಯಕ್ಷ ಜ್ಯೋತಿರಾಂ ಪವಾರ ಹಾಗೂ ಪದಾಧಿಕಾರಿಗಳಾದ ಅರುಣಕುಮಾರ ಗುಜ್ಜರ, ನವೀನ್ ಕೊಪ್ಪದ, ಇಮ್ತಿಯಾಜ ಹೊನವಾಡ, ಮಹೇಶ ಹಳ್ಳಿಕೇರಿ, ಸುಧೀರ ಕುಲಕರ್ಣಿ, ಸೋಮಶೇಖರ ಕಬಾಡೆ, ಬಾದಶಾ ಬೈಗನಪಲ್ಲಿ ಮತ್ತು ಧನಂಜಯ ಶಹಾಪುರ ಅವರುಗಳು ಬುದ್ಧವಿಹಾರಕ್ಕೆ ಭೇಟಿ ನೀಡಿ ಧನಸಹಾಯ ಸಲ್ಲಿಸಿದರು.
ಜೊತೆಗೆ ಮುಂದೆಯೂ ಹೆಚ್ಚಿನ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಸಂಘದ ಸದಸ್ಯರೆಲ್ಲರೂ ಈ ವಿಶೇಷ ಪುಸ್ತಕ ಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಪ್ರತಿವರ್ಷ ಅಂಬೇಡ್ಕರ್ ಜಯಂತಿಯಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಆಗಮಿಸುವ ಸಾರ್ವಜನಿಕರಿಗೆ ಸಂಘದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande