ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ - ಡಾ.ರಹಮತ್ ತರಿಕೆರಿ
ಕೊಪ್ಪಳ, 16 ಮಾರ್ಚ್ (ಹಿ.ಸ.) ಆ್ಯಂಕರ್: ಒಂದು ಕಾಲಕ್ಕೆ ಗೋಡೆಗಳ ಮೇಲೆ ವಿಜಯನಗರದ ಉಕ್ಕು ನಮ್ಮ ಹಕ್ಕು ಎನ್ನುವ ಘೋಷಣೆಗಳನ್ನು ಕೇಳುತ್ತಿದ್ದೇವು. ಮೂರು ದಶಕಗಳಲ್ಲಿ ಎಂತಹ ನಾಟಕೀಯ ಬದಲಾವಣೆಗಳಾಗಿವೆ. ಯಾವ ಕಾರ್ಖಾನೆಗಳು ದೇವರಂತೆ ಬಂದು ನಮ್ಮನ್ನು ಉದ್ದರಿಸಬೇಕು ಎಂದು ಯೋಚಿಸಿದ್ದೆವೋ ಅವು
ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ -  ಡಾ.ರಹಮತ್ ತರಿಕೆರಿ


ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ -  ಡಾ.ರಹಮತ್ ತರಿಕೆರಿ


ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ -  ಡಾ.ರಹಮತ್ ತರಿಕೆರಿ


ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ -  ಡಾ.ರಹಮತ್ ತರಿಕೆರಿ


ಕೊಪ್ಪಳ, 16 ಮಾರ್ಚ್ (ಹಿ.ಸ.)

ಆ್ಯಂಕರ್: ಒಂದು ಕಾಲಕ್ಕೆ ಗೋಡೆಗಳ ಮೇಲೆ ವಿಜಯನಗರದ ಉಕ್ಕು ನಮ್ಮ ಹಕ್ಕು ಎನ್ನುವ ಘೋಷಣೆಗಳನ್ನು ಕೇಳುತ್ತಿದ್ದೇವು. ಮೂರು ದಶಕಗಳಲ್ಲಿ ಎಂತಹ ನಾಟಕೀಯ ಬದಲಾವಣೆಗಳಾಗಿವೆ. ಯಾವ ಕಾರ್ಖಾನೆಗಳು ದೇವರಂತೆ ಬಂದು ನಮ್ಮನ್ನು ಉದ್ದರಿಸಬೇಕು ಎಂದು ಯೋಚಿಸಿದ್ದೆವೋ ಅವು ಈಗ ಶಾಪಗ್ರಸ್ತವಾಗಿವೆ. ಮಕ್ಕಳಿಗೆ ಸಿಗುತ್ತಿರುವುದು ದೂಳು ಮಲೀನ. ಸರಕಾರವನ್ನು ಜಗತ್ತನ್ನು ಆಳುತ್ತಿರುವುದು ಕಾರ್ಪೋರೇಟ್. ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಂಪಿ ವಿ.ವಿ. ನಿವೃತ್ತ ಪ್ರಾಧ್ಯಾಪಕರು ಮತ್ತು ಸಂಸ್ಕೃತಿ ಚಿಂತಕರು ಹಿರಿಯ ಸಂಶೋಧಕ ಚಿಂತಕ ಡಾ.ರಹಮತ್ ತರಿಕೆರಿ ಹೇಳಿದರು.

ನಗರದ ಗಾಣಿಗೇರ ಭವನದಲ್ಲಿ ತಿರುಳನ್ನಡ ಸಾಹಿತಿಗಳ ಸಹಕಾರ ಸಂಘ ನಿ.ಕೊಪ್ಪಳ, ಗಾಣದ ಕಣ್ಣಪ್ಪ ಪತ್ತಿನ ಸಹಕಾರ ಸಂಘ ನಿ.ಕೊಪ್ಪಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರೊ ಕೋರಗಲ್ ವಿರೂಪಾಕ್ಷಪ್ಪನವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಸಿಗೆ ನೀರು ಎರೆಯುವುದರ ಬದಲು ಸಸಿಯ ಮೇಲೆ ಕುಳಿತ ದೂಳನ್ನು ನೀರು ಹಾಕಿ ತೊಳೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಾಲಿನ್ಯ ಇದು ಗಾಳಿಗೆ ಸಂಬ0ಧಿಸಿದ್ದಲ್ಲ ಇದು ಪ್ರಜಾಸತ್ತೆಯ ಮಾಲಿನ್ಯ ಇದು. ಯಾವುದೇ ಪುಸ್ತಕಗಳ ಬಿಡುಗಡೆ ಯ ಕಾರ್ಯಕ್ರಮದಲ್ಲಿ ಊರಿನ ಸಮಸ್ಯೆಯು ಅದರ ತಲೆಬರಹವಾಗಿ ಬಂದಿದ್ದು ಇದೆ ಮೊದಲು ಇರಬೇಕು. ಬರಹ ಎನ್ನುವುದು ಮದ್ಯಮ ವರ್ಗದವರ ವಿಲಾಸ ಅಲ್ಲ. ಜನರ ನೋವಿಗೆ ಮೀಡಿಯದಿದ್ದರೆ ಅದಕ್ಕೆ ಅರ್ಥವಿಲ್ಲ. ಕೊಪ್ಪಳ ನನ್ನನ್ನು ವೈಚಾರಿಕವಾಗಿ ಬೆಳೆಸಿದ ಕರ್ಮಭೂಮಿ. ಪುಸ್ತಕಗಳು ಬಹಳಷ್ಟಿವೆ. ಆದರೆ ವೈಚಾರಿಕ ಸ್ಪಷ್ಟತೆ ಮುಖ್ಯ. ಪ್ರಜಾಪ್ರಭುತ್ವಕ್ಕಷ್ಟೇ ಅಲ್ಲ ಇಂದಿನ ದಿನಗಳಲ್ಲಿ ಕಲಾಲೋಕಕ್ಕೂ ಮಾಲಿನ್ಯ ಆವರಿಸಿದೆ.

ಕೊಪ್ಪಳದ ಹಿರಿಯ ಬರಹಗಾರರು ಚಳುವಳಿಗಳ ಗೆಳೆಯರು ಎಲ್ಲರು. ಚಳುವಳಿ ಹೊಸಪೇಟೆ ಹಾಗೂ ಕೊಪ್ಪಳವನ್ನು ಬೆಸೆದಿದೆ. ವಿರುಪಾಕ್ಷಪ್ಪ ಕೊರಗಲ್ ಅವರ ಬರಹಗಳಲ್ಲಿ ಚಳುವಳಿಯ ಅಂತಃಸತ್ವವಿದೆ. sಸೋಗಿಲ್ಲದ ಭಾಷೆ ಅವರದು. ಕೇವಲ ಕೊಪ್ಪಳ ಅಷ್ಟೇ ಅಲ್ಲದೇ ನಿಪ್ಪಾಣಿ ಹಾಗೂ ಹಾವೇರಿಯ ಭಾಷೆ ಇದೆ. ಕಣ್ಣಿಗೆ ಕಟ್ಟುವಂತೆ ಬರೆಯುತ್ತಾರೆ. ೮೬ ವರ್ಷದಲ್ಲೂ ಸೃಜನಶೀಲರಾಗಿ ಬರೆಯುತ್ತಿದ್ದಾರೆ. ಬೌದ್ದಿಕ ಎಚ್ಚರವನ್ನು ಇಷ್ಟು ವರ್ಷ ಕಾದಿಟ್ಟುಕೊಂಡಿದ್ದಾರೆ. ಮನುಷ್ಯರು ಸ್ಥಾನ ಬಲದಿಂದ ಅಲ್ಲ ಸಹಜ ಮಾನವೀಯ ವರ್ತನೆಗಳಿಂದ ದೊಡ್ಡವರಾಗಿರುವವರ ಬಗ್ಗೆ ಬರಹವಿದೆ. ಅಂತಃಕರಣದ ಸಾಹಿತಿ ವಿರುಪಾಕ್ಷಪ್ಪ ಕೊರಗಲ್. ಮನುಷ್ಯತ್ವದ ವಿಶ್ವಕೋಶವನ್ನು ತಮ್ಮ ಪುಟ್ಟ ಕೃತಿಯಲ್ಲಿ ನೀಡಿದ್ದಾರೆ. ಎಲ್ಲರೊಳಗೂ ದೊಡ್ಡ ಚೈತನ್ಯವಿದೆ. ಆ ಚೈತನ್ಯವನ್ನು ಗುರುತಿಸುವ ಬರಹಗಾರ ಕೊರಗಲ್. ಇದು ಫಿಲಾಸಫಿ ಎಂದು ಹೇಳಿದರು.

ಇದಕ್ಕೂ ಮೊದಲು ರೇಷ್ಮೆ ಕೌದಿ (ವೈಚಾರಿಕ ಬರಹಗಳು) ಕುರಿತು ಹಿರಿಯ ಸಾಹಿತಿ ಎ.ಎಂ.ಮದರಿ ಮಾತನಾಡಿದರು. ವೈತರಣಿಯಲ್ಲಿ ಹೆಣ್ಣು (ಕಥಾ ಸಂಕಲನ) ಕುರಿತು ಶ್ರೀಮತಿ ಸಾವಿತ್ರಿ ಮುಜುಮದಾg ಮಾತನಾಡಿದರು.

ಅಧ್ಯಕ್ಷತೆಯನ್ನು ಪ್ರೊ ಅಲ್ಲಮಪ್ರಭು ಬೆಟ್ಟದೂರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್ ಎಸ್ ಪಾಟೀಲ್,

ಹಿರಿಯ ಸಾಹಿತಿ ಡಾ.ಕೆ.ಬಿ.ಬ್ಯಾಳಿ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ತೋಟಪ್ಪ ಕಾಮನೂರ , ಕೊಪ್ಪಳ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕ ಡಾ ಪ್ರವೀಣ ಪೋಲೀಸ ಪಾಟೀಲ ಸಂಗನಗೌಡರು ಬಿ.ಟಿ ಪಾಟೀಲ ಅಧ್ಯಕ್ಷರು ಪಿ.ಎಲ್.ಡಿ.ಬ್ಯಾಂಕ ಕೊಪ್ಪಳ ಉಪಸ್ಥಿತರಿದ್ದರು. ಲೇಖಕ ವಿರುಪಾಕ್ಷಪ್ಪ ಕೊರಗಲ್ ತಮ್ಮ ಕೊಪ್ಪಳದ ಸಾಹಿತ್ಯ ಬಳಗದ ಬದುಕಿನ ಒಡನಾಟವನ್ನು ಆತ್ಮೀಯವಾಗಿ ಸ್ಮರಿಸಿಕೊಂಡರು.

ಸ್ವಾಗತವನ್ನು ಅರುಣಾ ನರೇಂದ್ರ ಹಾಗೂ ನಿರೂಪಣೆಯನ್ನು ನಿವೃತ್ತ ಉಪನ್ಯಾಸಕ ಶಂಭುಲಿAಗಪ್ಪ ಹರಗೇರಿ ನೆರವೇರಿಸಿದರು.

ವಿರುಪಾಕ್ಷಪ್ಪ ಕೊರಗಲ್ ರ ಕುಟುಂಬಸ್ತರು, ಬರಹಗಾರರು, ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande