ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಡಿ ಹೆಚ್ ಓ
ಬಳ್ಳಾರಿ, 16 ಮಾರ್ಚ್ (ಹಿ.ಸ.) ಆ್ಯಂಕರ್: ತಾಲೂಕಿನ ಕೆ. ವೀರಾಪುರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಎಲ್ಲಾ ರಮೇಶ್ ಬಾಬು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಮಾನಸಿಕ ಧೈರ್ಯ ತುಂಬಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಡಿ ಹೆಚ್ ಓ


ಬಳ್ಳಾರಿ, 16 ಮಾರ್ಚ್ (ಹಿ.ಸ.)

ಆ್ಯಂಕರ್: ತಾಲೂಕಿನ ಕೆ. ವೀರಾಪುರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಎಲ್ಲಾ ರಮೇಶ್ ಬಾಬು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಮಾನಸಿಕ ಧೈರ್ಯ ತುಂಬಿ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಲಿ ಎಂದು ಶುಭಹಾರೈಸಿದರು.

ಕೆ. ವೀರಾಪುರದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಮೊದಲಿನಿಂದಲೂ ದತ್ತು ತೆಗೆದುಕೊಂಡು ಸಹಕಾರ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪರೀಕ್ಷಾ ಸಾಮಗ್ರಿಗಳಿಗಾಗಿ ಸುಮಾರು ರೂ. 8000 ಹಾಗೂ ವೀರಾಪುರದಿಂದ ಚೆಳ್ಳಗುರ್ಕಿಗೆ ಹೋಗಿ ಪರೀಕ್ಷೆ ಬರೆಯಲು ಆಟೋ ಪ್ರಯಾಣದ ವೆಚ್ಚಕ್ಕೆ ರೂ. 4500 ದೇಣಿಗೆಯಾಗಿ ನೀಡಿದರು.

ಅವರ ಈ ಸಹಾಯ ಹಾಗೂ ಪ್ರೋತ್ಸಾಹಕ್ಕೆ ನಮ್ಮ ಶಾಲೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಶಾಲೆಯ ಎಚ್ಎಂ ಟಿಜಿ ನಾಗರಾಜ ಅವರು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande