ಬಳ್ಳಾರಿ : ಆಶಾ ಕಾರ್ಯಕರ್ತರ ವಜಾ ಮಾಡಿದ್ದಲ್ಲಿ ಮಾರ್ಚ್ 25 ರಿಂದ ಪ್ರತಿಭಟನೆ
ಬಳ್ಳಾರಿ, 16 ಮಾರ್ಚ್ (ಹಿ.ಸ.) ಆ್ಯಂಕರ್: ಬಳ್ಳಾರಿ ಜಿಲ್ಲೆಯಲ್ಲಿ ಕೈಬಿಟ್ಟಿರುವ 200 ಆಶಾ ಕಾರ್ಯಕರ್ತರನ್ನು ಕೆಲಸದಿಂದ ವಜಾ ಮಾಡಿದಲ್ಲಿ ಮಾರ್ಚ್ 25 ರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ತಿಳಿಸಿದೆ. ಎಐಯುಟಿಯುಸಿ ರಾಜ್ಯ ಅಧ್ಯಕ್ಷ
ಬಳ್ಳಾರಿ : ಆಶಾ ಕಾರ್ಯಕರ್ತರ ವಜಾ ಮಾಡಿದ್ದಲ್ಲಿ ಮಾರ್ಚ್ 25 ರಿಂದ ಪ್ರತಿಭಟನೆ


ಬಳ್ಳಾರಿ, 16 ಮಾರ್ಚ್ (ಹಿ.ಸ.)

ಆ್ಯಂಕರ್: ಬಳ್ಳಾರಿ ಜಿಲ್ಲೆಯಲ್ಲಿ ಕೈಬಿಟ್ಟಿರುವ 200 ಆಶಾ ಕಾರ್ಯಕರ್ತರನ್ನು ಕೆಲಸದಿಂದ ವಜಾ ಮಾಡಿದಲ್ಲಿ ಮಾರ್ಚ್ 25 ರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ತಿಳಿಸಿದೆ.

ಎಐಯುಟಿಯುಸಿ ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಅವರು ಬಳ್ಳಾರಿಯಲ್ಲಿ ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಕಷ್ಟಪಡುತ್ತಿದ್ದಾರೆ. ಆರ್ಸಿಹೆಚ್ ಪೋರ್ಟಲ್ನ ತಾಂತ್ರಿಕ ಸಮಸ್ಯೆಯ ಕಾರಣ ಅವರಿಗೆ ದುಡಿದಷ್ಟು ವೇತನ ಬರುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮುಖಮಂತ್ರಿಗಳು ಪ್ರತಿಯೊಬ್ಬ ಆಶಾಗೆ ಕನಿಷ್ಠ ರೂ.10,000 ಗ್ಯಾರೆಂಟಿ ಭರವಸೆಯನ್ನು ಜನವರಿಯಲ್ಲಿ ನೀಡಿದ್ದರು. ಈ ಭರವಸೆ ಈಡೇರಿಸಲಿಲ್ಲ. ಬದಲಾಗಿ ವಿವಿಧ ಕಾರಣಗಳನ್ನು ನೀಡಿ ಆಶಾಗಳನ್ನು ಕೈಬಿಡುವ ಹುನ್ನಾರ ರಾಜ್ಯ ಸರ್ಕಾರದಲ್ಲಿ ನಡೆದಿದೆ. ಆಶಾಗಳನ್ನು ಕೈಬಿಡುವ ಕ್ರಮ ಅಮಾನವೀಯ ಕ್ರಮವಾಗಿದೆ ಎಂದರು.

ಆಶಾ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಎ. ಶಾಂತಾ, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರಾದ ಎ. ದೇವದಾಸ್, ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಎನ್., ಜಿಲ್ಲಾ ಅಧ್ಯಕ್ಷರಾದ ಎಂ.ಗೀತಾ ಅವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸುರೇಶ್, ಮಾಣಿಕ್ಯಮ್ಮ, ರೇಷ್ಮಾ, ರಾಮಕ್ಕ, ಜಲಜಾಕ್ಷಿ, ಪಾವನಿ, ಈರಮ್ಮ, ಕವಿತಾ ಮುಂತಾದವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande