ಕೆರೆ ತುಂಬುವ ಯೋಜನೆಯಿಂದ 35 ಲಕ್ಷ ದ್ರಾಕ್ಷಿ ಬೆಳೆದ ರೈತ:ಸಚಿವ ಎಂ.ಬಿ. ಪಾಟೀಲ ಸಂತಸ
ವಿಜಯಪುರ, 16 ಮಾರ್ಚ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತ ಮಲ್ಲಪ್ಪ ಸಕ್ರಿ ಅವರು ಕೆರೆ ತುಂಬುವ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ 4 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು ಸುಮಾರು 35 ಲಕ್ಷ ರೂಪಾಯಿ ಲಾಭದ ಪಡೆದಿರುವುದು ಗಮನ ಸೆಳೆದಿ
ಕೆರೆ ತುಂಬುವ ಯೋಜನೆಯಿಂದ 35 ಲಕ್ಷ ದ್ರಾಕ್ಷಿ ಬೆಳೆದ ರೈತ:ಸಚಿವ ಎಂ.ಬಿ. ಪಾಟೀಲ ಸಂತಸ


ವಿಜಯಪುರ, 16 ಮಾರ್ಚ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ

ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಸಿದ್ದಾಪುರ ಗ್ರಾಮದ ರೈತ ಮಲ್ಲಪ್ಪ ಸಕ್ರಿ ಅವರು ಕೆರೆ ತುಂಬುವ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ 4 ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದು ಸುಮಾರು 35 ಲಕ್ಷ ರೂಪಾಯಿ ಲಾಭದ ಪಡೆದಿರುವುದು ಗಮನ ಸೆಳೆದಿದೆ.

ಈ ಕುರಿತು ರೈತ ಸಕ್ರಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ನಿವಾಸದಲ್ಲಿ ದ್ರಾಕ್ಷಿ ತಿನಿಸುವ ಮೂಲಕ ಸಂತಸ ಹಂಚಿಕೊಂಡನು.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಸಚಿವ ಎಂ ಬಿ ಪಾಟೀಲ್,

ರೈತ ಮಲ್ಲಪ್ಪ ಸಕ್ರಿ ಅವರ ತೋಟದಲ್ಲಿ ಉತ್ತಮವಾಗಿ ಬೆಳೆಯುತ್ತಿರುವ ದ್ರಾಕ್ಷಿ ಬೆಳೆ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು. ರೈತರ ಇಂತಹ ಸಾಧನೆಗಳು ನೀರಾವರಿ ಯೋಜನೆಗಳ ಪರಿಣಾಮಕಾರಿತ್ವಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.

ತಮ್ಮ ತೋಟದಲ್ಲಿ ಬೆಳೆದ ದ್ರಾಕ್ಷಿ ಹಣ್ಣುಗಳನ್ನು ಪ್ರೀತಿಯಿಂದ ನೀಡುವ ಮೂಲಕ ರೈತ ಮಲ್ಲಪ್ಪ ಸಕ್ರಿ ಅವರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಅಭಿಮಾನಕ್ಕೆ ಸಚಿವರು ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

ಕೆರೆ ತುಂಬುವ ಯೋಜನೆಯಿಂದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಾಗಿ ಕೃಷಿಯಲ್ಲಿ ಉತ್ತಮ ಫಲಿತಾಂಶ ಕಾಣಿಸುತ್ತಿದೆ. ರೈತರ ಮುಖದಲ್ಲಿ ಮೂಡುವ ಸಂತೋಷದ ನಗುಗಳೇ ನಮ್ಮ ಕೆಲಸದ ನಿಜವಾದ ಫಲ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande