ಮಣಿಪುರದಲ್ಲಿ ಭದ್ರತಾ ಪಡೆಗಳ ದಾಳಿ ; 6 ಉಗ್ರರ ಬಂಧನ
ನಾನಾ
Arrest


ಇಂಫಾಲ್, 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಮಣಿಪುರದ ನಾನಾ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಉಗ್ರಗಾಮಿ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.

ಅಧಿಕೃತ ಪ್ರಕಟಣೆ ಪ್ರಕಾರ, ಮೊದಲ ಕಾರ್ಯಾಚರಣೆಯಲ್ಲಿ ಇಂಫಾಲ್ ಪಶ್ಚಿಮ ಜಿಲ್ಲೆಯ ಘಾರಿ ಪ್ರದೇಶದಿಂದ ಪ್ರಿಪಾಕ್ ಸಂಘಟನೆಯ ಸಕ್ರಿಯ ಕೇಡರ್ ಥೋಕ್ಚೋಮ್ ರಾಜ್ ಸಿಂಗ್ (25) ಅಲಿಯಾಸ್ ಇಬುಂಗೊ ಅವರನ್ನು ಬಂಧಿಸಲಾಯಿತು. ಆತನಿಂದ ಮೊಬೈಲ್ ಫೋನ್ ಮತ್ತು ಆಧಾರ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಎರಡನೇ ಕಾರ್ಯಾಚರಣೆಯಲ್ಲಿ, ಕೆಸಿಪಿ ಸಂಘಟನೆಯ ಕೇಡರ್ ಪೃಥ್ವಿರಾಜ್ ಮೊಯಿರಾಂಗ್ಥೆಮ್ ಅಲಿಯಾಸ್ 3ಬಿ (26) ಅವರನ್ನು ಇಂಫಾಲ್ ಪೂರ್ವ ಜಿಲ್ಲೆಯ ಇರಿಲ್ಬಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸದಿಂದ ಬಂಧಿಸಲಾಯಿತು.

ಮೂರನೇ ಕಾರ್ಯಾಚರಣೆಯಲ್ಲಿ, ಇಂಫಾಲ್ ಪೂರ್ವ ಜಿಲ್ಲೆಯ ಯೈಂಗಂಗ್ಪೋಕ್ಪಿ ಪ್ರದೇಶದಲ್ಲಿ ಆರ್ಪಿಎಫ್/ಪಿಎಲ್ಎ ಸಂಘಟನೆಯ ಇಬ್ಬರು ಕಾರ್ಯಕರ್ತರಾದ ಥಿಂಗೋಮ್ ಮಹೇನ್ಜಿತ್ ಸಿಂಗ್ (22) ಮತ್ತು ನ್ಗಾಂಗ್ಬಾಮ್ ಡೆರಿಕ್ ಸಿಂಗ್ (20) ಬಂಧಿತರಾದರು. ಅವರ ಬಳಿಯಿಂದ ನಂ. 36 ಹ್ಯಾಂಡ್ ಗ್ರೆನೇಡ್, ಒಂದು ಡಿಟೋನೇಟರ್, ವಿವಿಧ ಕ್ಯಾಲಿಬರ್ಗಳ 10 ಲೈವ್ ಸುತ್ತುಗಳು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ಕನೇ ಕಾರ್ಯಾಚರಣೆಯಲ್ಲಿ, ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ಆರ್ಪಿಎಫ್/ಪಿಎಲ್ಎ ಕೇಡರ್ ಮೊಯಿರಾಂಗ್ಥೆಮ್ ಜೆನ್ಸನ್ ಸಿಂಗ್ (26) ಅವರನ್ನು ಇಂಫಾಲ್ ಪೂರ್ವ ಜಿಲ್ಲೆಯ ಹೀಂಗಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು. ಆತನಿಂದ ಮೂರು ಆರ್ಪಿಎಫ್/ಪಿಎಲ್ಎ ಫೌಂಡೇಶನ್ ಡೇ ಬ್ಯಾನರ್ಗಳು ಮತ್ತು ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಐದನೇ ಕಾರ್ಯಾಚರಣೆಯಲ್ಲಿ, ಇಂಫಾಲ್ ಪಶ್ಚಿಮ ಜಿಲ್ಲೆಯ ವಹೆಂಗ್ ಖುಮಾನ್ ಪ್ರದೇಶದಿಂದ ಲಾಂಗ್ಜಾಮ್ ಯೈಫಾಬಾ ಅಂಗೋಮ್ (30) ಬಂಧಿತರಾಗಿದ್ದಾರೆ. ಆತನಿಂದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande