ಚಂದ್ರಶೇಖರ ಆಜಾದ್ ಪುಣ್ಯತಿಥಿ ; ಅಮಿತ್ ಶಾ ಗೌರವ ನಮನ
ನವದೆಹಲಿ, 27 ಫೆಬ್ರವರಿ (ಹಿ.ಸ.) : ಆ್ಯಂಕರ್ : ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕೊನೆಯ ಉಸಿರಿನವರೆಗೂ ಹೋರಾಡಿದ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಪುಣ್ಯತಿಥಿಯಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವ ನಮನ ಸಲ್ಲಿಸಿದ್ದಾರೆ. “ವಂದೇ ಮಾತರಂ” ಘೋಷಣೆ ಮೊಳಗಿಸುತ್ತಾ ಸ್ವಾತಂತ್ರ್ಯಕ್ಕಾಗಿ ಜೀವ
Azad


ನವದೆಹಲಿ, 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕೊನೆಯ ಉಸಿರಿನವರೆಗೂ ಹೋರಾಡಿದ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಅವರ ಪುಣ್ಯತಿಥಿಯಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೌರವ ನಮನ ಸಲ್ಲಿಸಿದ್ದಾರೆ.

“ವಂದೇ ಮಾತರಂ” ಘೋಷಣೆ ಮೊಳಗಿಸುತ್ತಾ ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ ಆಜಾದ್ ಅವರ ಜೀವನ ದೇಶಭಕ್ತಿಯ ಪ್ರತೀಕವಾಗಿದೆ ಎಂದು ಶಾ ತಿಳಿಸಿದ್ದಾರೆ. ಕಾಕೋರಿ ರೈಲು ಆಂದೋಲನ, ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ರಚನೆ ಹಾಗೂ ಕ್ರಾಂತಿಕಾರಿಗಳ ಸಂಘಟನೆಗೆ ಬಲ ತುಂಬಿದ ಅವರ ಕಾರ್ಯಗಳನ್ನು ಅವರು ಸ್ಮರಿಸಿದರು.

ಚಂದ್ರಶೇಖರ ಆಜಾದ್ ಅವರ ಜೀವನದ ಪ್ರತಿಕ್ಷಣವೂ ದೇಶದ ಸ್ವಾತಂತ್ರ್ಯಕ್ಕಾಗಿ ಮೀಸಲಾಗಿತ್ತು. ಅವರ ತ್ಯಾಗ ಮತ್ತು ಶೌರ್ಯದ ಕಥೆ ಇಂದಿಗೂ ಯುವಜನತೆಯನ್ನು ದೇಶಸೇವೆಯ ಮಾರ್ಗದಲ್ಲಿ ಪ್ರೇರೇಪಿಸುತ್ತದೆ ಎಂದು ಶಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande