ಉತ್ತರ ಕರ್ನಾಟಕದ ಯುವಕರು ಉದ್ಯೋಗದಾತರು ಆಗಬೇಕು
ವಿಜಯಪುರ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ಯುವಕರು ಕೇವಲ ಉದ್ಯೋಗಾಂಕ್ಷಿಗಳಾಗದೆ ಉದ್ಯೋಗದಾತರೂ ಆಗಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ.ಎಂ.ಪಾಟೀಲ ಆಶಯ ವ್ಯಕ್ತಪಡಿಸಿದರು. ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹ
ಉತ್ತರ ಕರ್ನಾಟಕದ ಯುವಕರು ಉದ್ಯೋಗದಾತರು ಆಗಬೇಕು


ವಿಜಯಪುರ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ಯುವಕರು ಕೇವಲ ಉದ್ಯೋಗಾಂಕ್ಷಿಗಳಾಗದೆ ಉದ್ಯೋಗದಾತರೂ ಆಗಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ.ಎಂ.ಪಾಟೀಲ ಆಶಯ ವ್ಯಕ್ತಪಡಿಸಿದರು.

ಬಿ.ಎಲ್.ಡಿ.ಇ ಸಂಸ್ಥೆ ಎಸ್.ಬಿ.ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಇಂದು ನಡೆದ ‘ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳು’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹಿಂದುಳಿದ, ಬರದ ಜಿಲ್ಲೆ ಎಂಡು ಹೆಸರಾಗಿದ್ದ ವಿಜಯಪುರ ಜಿಲ್ಲೆ ಇಂದು ಬದಲಾಗಿದೆ. ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆಗೆ ಹೆಚ್ಚಿನ ಅವಕಾಶಗಳು ಇದ್ದು, ಇವುಗಳನ್ನು ಗ್ರಾಮೀಣ ಮಟ್ಟದಲ್ಲಿ ವೈಜ್~ಝಾನಿಕ ಆಧಾರದ ಮೇಲೆ ಬಲಗೊಳಿಸಿ, ಉತ್ಪಾದನೆಯ ಅವಕಾಶಗಳನ್ನು ಹೆಚ್ಚಿಸಲು ಬಿ.ಎಲ್.ಡಿ.ಇ ಸಂಸ್ಥೆ ಮೂಲಕ ಪ್ರಯತ್ನಗಳು ಆರಂಭಗೊಂಡಿವೆ ಎಂದರು.

ಬಿ.ಎಲ್.ಡಿ.ಇ ಸಂಸ್ಥೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿನೂತನ ಕಾರ್ಯಗಳನ್ನು ಮಾಡುತ್ತಲಿದೆ. ನಮ್ಮ ತಂದೆ, ಕೈಗಾರಿಕೆ ಸಚಿವ ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿ ಜಲ, ವೃಕ್ಷ, ಶಿಕ್ಷಣ, ಆರೋಗ್ಯ, ಹಾಗು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದರೊಂದಿಗೆ ಫಾಕ್ಸ್ ಕಾನ್, ಟೊಯೊಟಾದಂತಹ ದೈತ್ಯ ಕಂಪನಿಗಳನ್ನು ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ವಿಜಯಪುರದ ವಿಮಾನ ನಿಲ್ದಾಣ ವ್ಯಾಜ್ಯ ಸುಪ್ರಿಂಕೋರ್ಟನಲ್ಲಿ ಬಗೆಹರಿದು 2-3 ತಿಂಗಳಲ್ಲಿ ವಿಮಾನ ಸಂಪರ್ಕ ಆರಂಭವಾಗಲಿದೆ. ಈ ಎಲ್ಲ ಅವಕಶಗಳನ್ನು ಬಳಸಿ ನಮ್ಮ ಯುವಕರು ಮುಂದುವರೆಯಬೇಕು ಎಂದು ಎಂದರು.

ಉದ್ಯಮಿ ವೀರೇಂದ್ರ ಗುಚ್ಚಟ್ಟಿ ಮಾತನಾಡಿ, ನೀರು ನಮಗೆ ಉತ್ತಮ ಅವಕಾಶಗಳನ್ನು ನೀಡಿದೆ. ಇದನ್ನು ಪರಿವರ್ತಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಸುಧಾರಿತ ನೀರಾವರಿ ಮತ್ತು ಮೂಲಸೌಕರ್ಯಗಳಿಂದ ಆಧುನಿಕ ಕೃಷಿ ಮತ್ತು ತೋಟಗಾರಿಕೆ, ಗ್ರಾಮೀಣ ಉದ್ಯಮಶೀಲತೆ ಮತ್ತು ನಾವೀನ್ಯತೆ, ಕೃಷಿ-ಸಂಸ್ಕರಣೆ ಮತ್ತು ಲಾಜಿಸ್ಟಿಕ್ಸ್, ಯುವಕರಿಗೆ ಕೌಶಲ್ಯ ಆಧಾರಿತ ಉದ್ಯೋಗ, ಸಮರ್ಥನೀಯ ಮತ್ತು ತಂತ್ರಜ್ಞಾನ-ಚಾಲಿತ ಅಭಿವೃದ್ಧಿ ಹೀಗೆ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದು ಎಂದರು.

ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ವಿಜಯಪುರದಲ್ಲಿ ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳಾಗಿರುವವರು ಬೆರಣಿಕೆ. ಇದಕ್ಕೆ ಕಾರಣ ಬಡತನ ಮತ್ತು ಬರಗಾಲ. ಕೃಷಿ ಅವಂಭಿತರಾಗಿರುವ ನಾವು. ಎಸ್.ಎಸ್.ಎಲ್., ಪಿ.ಯುಸಿ, ಡಿಗ್ರಿ ಮುಗಿಯುತ್ತಲ್ಲೇ ಟಿಸಿಎಚ್ ಮುಗಿಸಿ, ಶಿಕ್ಷಕರಾಗುವುದು, ಪೊಲೀಸ್ ಅಥವಾ ಬಸ್ ಕಂಡಕ್ಟರ್ ಹುದ್ದೆಗಳಿಗೆ ಆಗುವದಕ್ಕೆ ಸೀಮಿರಾಗಿದ್ದಾರೆ. ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲದ ಕಾರಣ ಕೆ.ಎ.ಎಸ್., ಐಪಿಎಸ್ ಉನ್ನತ ಅಧಿಕಾರಿಗಳ ಸಂಖ್ಯೆ ಕಡಿಮೆ ಇದೆ. ಇಂದು ಕೃಷಿ ಸುಧಾರಣೆಯಾಗಿದೆ. ಯುವಕರ ಕೂಡ ಉದ್ಯೋಗದ ಬದಲಾಯಿಸಿಕೊಳ್ಳಬಹುದು. ಜೆನ್ಜಿ ಯುವ ಜನಾಂಗ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸ್ವಚ್ಚ, ಸುಂದರ, ಹಸಿರು ವಿಜಯಪುರ ನಿರ್ಮಾಣಕ್ಕೆ ನಾವು ನೀವು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ, ಆಡಳಿತಾಧಿಕಾರಿ ವಿಲಾಸ ಬಗಲಿ ವೇದಿಕೆಯಲ್ಲಿದ್ದರು. ಬಿ.ಎಲ್.ಡಿ.ಇ ಸಂಸ್ಥೆ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಯೋಜಕ ಸೂರ್ಯಕಾಂತ ಬಿರಾದಾರ, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande