ರೈಲುಗಳ ಭಾಗಶಃ ರದ್ದತಿ ಅವಧಿ ವಿಸ್ತರಣೆ
ಹುಬ್ಬಳ್ಳಿ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ರೇಲ್ವೆ ವಿಭಾಗದ ಕ್ಯಾಸಲ್ ರಾಕ್ ಮತ್ತು ಲೋಂಡಾ ರೈಲು ನಿಲ್ದಾಣಗಳ ನಡುವೆ ಏಕಪಥದ ರೈಲು ಸಂಚಾರ ಹಾಗೂ ಹಳಿ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ, ಈ ಕೆಳಕಂಡ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ. ಇದರನ್ವಯ, ಮಿರಜ್–ಕ್
ರೈಲುಗಳ ಭಾಗಶಃ ರದ್ದತಿ ಅವಧಿ ವಿಸ್ತರಣೆ


ಹುಬ್ಬಳ್ಳಿ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ರೇಲ್ವೆ ವಿಭಾಗದ ಕ್ಯಾಸಲ್ ರಾಕ್ ಮತ್ತು ಲೋಂಡಾ ರೈಲು ನಿಲ್ದಾಣಗಳ ನಡುವೆ ಏಕಪಥದ ರೈಲು ಸಂಚಾರ ಹಾಗೂ ಹಳಿ ಜೋಡಿ ಮಾರ್ಗದ ಕಾಮಗಾರಿ ನಡೆಯುತ್ತಿರುವುದರಿಂದ, ಈ ಕೆಳಕಂಡ ರೈಲುಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ.

ಇದರನ್ವಯ, ಮಿರಜ್–ಕ್ಯಾಸಲ್ ರಾಕ್ ದೈನಂದಿನ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17333) ಈ ಹಿಂದೆ ಫೆಬ್ರವರಿ 28, 2026 ರವರೆಗೆ ಭಾಗಶಃ ರದ್ದಾಗಿತ್ತು. ಈಗ ಈ ಅವಧಿಯನ್ನು ಮಾರ್ಚ್ 01 ರಿಂದ ಮೇ 31, 2026ರವರೆಗೆ ವಿಸ್ತರಿಸಲಾಗಿದ್ದು, ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.

ಅದೇ ರೀತಿ, ಕ್ಯಾಸಲ್ ರಾಕ್–ಮಿರಜ್ ದೈನಂದಿನ ಎಕ್ಸ್ಪ್ರೆಸ್ (ರೈಲು ಸಂಖ್ಯೆ 17334) ಸಹ ಫೆಬ್ರವರಿ 28, 2026 ರವರೆಗೆ ಭಾಗಶಃ ರದ್ದಾಗಿತ್ತು. ಇದೀಗ ಮಾರ್ಚ್ 01 ರಿಂದ ಮೇ 31, 2026 ರವರೆಗೆ ಕ್ಯಾಸಲ್ ರಾಕ್ ಮತ್ತು ಲೋಂಡಾ ನಡುವೆ ಈ ರೈಲು ಭಾಗಶಃ ರದ್ದಾಗಲಿದೆ. ಈ ಅವಧಿಯಲ್ಲಿ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande