
ವಿಜಯಪುರ, 26 ಫೆಬ್ರವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬಿ.ಎಲ್.ಡಿ.ಇ ಆಯುರ್ವೇದ ಆವರಣದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಫೆಬ್ರವರಿ 27 ರಂದು ಶುಕ್ರವಾರ ಉಚಿತ ಮಧುಮೇಹ ತಪಾಸಣೆ ಶಿಬಿರ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30ರ ವರೆಗೆ ಮಧುಮೇಹದ ಕುರಿತು ನುರಿತ ತಜ್ಞ ವೈದ್ಯರು ಜಾಗೃತಿ ಉಪನ್ಯಾಸ ನೀಡಲಿದ್ದಾರೆ.
ಈ ಮಧುಮೇಹ ಉಚಿತ ತಪಾಸಣೆ ಶಿಬಿರದಲ್ಲಿ ಪಾಲ್ಗೊಳ್ಳಲು ಬಯಸುವ ಶಿಬಿರಾರ್ಥಿಗಳು ಒಂದು ದಿನ ಮೊದಲೇ ಅಂದರೆ ಫೆಬ್ರವರಿ 26 ರಂದು ಗುರುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಮ್ಮ ರಕ್ತವನ್ನು ತಪಾಸಣೆಗೆ ಕೊಡಬೇಕು. ಫೆಬ್ರವರಿ 27 ರಂದು ಈ ರಕ್ತ ತಪಾಸಣೆ ವರದಿಗಳನ್ನು ತಜ್ಞ ವೈದ್ಯರು ಪರಿಶೀಲನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.
ಈ ಉಚಿತ ರಕ್ತ ಮತ್ತು ಮೂತ್ರ ತಪಾಸಣೆಯಲ್ಲಿ ಸಂದರ್ಭಫದಲ್ಲಿ ಹಿಮೋಗ್ಲೋಬಿನ್, ಮೂತ್ರ ತಪಾಸಣೆ, ಸೀರಮ್ ಕ್ರಿಯೇಟಿನೈನ್, ಉಪವಾಸ ರಕ್ತದಲ್ಲಿನ ಸಕ್ಕರೆ (FBS), ರಕ್ತಯೂರಿಯಾ, ಊಟದ ನಂತರದ ರಕ್ತದಲ್ಲಿನ ಸಕ್ಕರೆ (PPBS), ECG ಒಳಗೊಂಡಿವೆ.
HbAlc ಮತ್ತು ಲಿಪಿಡ್ ಪ್ರೊಫೈಲ್ ಗಳನ್ನು ಶೇ. 40 ರಿಯಾಯಿತಿ ದರದಲ್ಲಿ ನಡೆಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೊಳ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande