ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಪ್ರಕಟಣೆ
ಬೆಂಗಳೂರು, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ನ ಅಭಿಕರ ಎಂಬಲ್ಲಿ ದಲಿತ ಸಮುದಾಯದ ಕುಟುಂಬವೊಂದರ ಮನೆಯ ಶೌಚಾಲಯವು ಶಿಥಿಲಗೊಂಡಿದ್ದು, ಸಮಸ್ಯೆಯಾಗುತ್ತಿರುವುದಾಗಿ ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತ
P


ಬೆಂಗಳೂರು, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ನ ಅಭಿಕರ ಎಂಬಲ್ಲಿ ದಲಿತ ಸಮುದಾಯದ ಕುಟುಂಬವೊಂದರ ಮನೆಯ ಶೌಚಾಲಯವು ಶಿಥಿಲಗೊಂಡಿದ್ದು, ಸಮಸ್ಯೆಯಾಗುತ್ತಿರುವುದಾಗಿ ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗದ ಗಮನಕ್ಕೆ ತಂದಿರುತ್ತಾರೆ. ಈ ಬಗ್ಗೆ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಸದರಿ ಕುಟುಂಬಕ್ಕೆ ತಾಲ್ಲೂಕು ಪಂಚಾಯತ್ನ ಅನುದಾನದಲ್ಲಿ ತುರ್ತು ಶೌಚಾಲಯವನ್ನು 10 ದಿನದೊಳಗಾಗಿ ಹಸ್ತಾಂತರಿಸಲಾಗುವುದೆಂದು ಕಡಬ ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande