ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆ ಚಾಲನೆ
ಹಾಸನ, 26 ಫೆಬ್ರವರಿ (ಹಿ.ಸ.) : ಆ್ಯಂಕರ್ : ಜಮೀನಿನ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆಯಾಗುವುದನ್ನು ಮಾರ್ಪಾಡು ಮಾಡಿರುವುದನ್ನು ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದಾದ್ಯಂತ ಜಾರಿಗೆ ಬರುವಂತೆ ಚಾಲನೆ ನೀಡಿರುತ್ತಾರೆ.
ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆ ಚಾಲನೆ


ಹಾಸನ, 26 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಜಮೀನಿನ ಹಕ್ಕು ಬದಲಾವಣೆಗೆ ಸಂಬಂಧಿಸಿದಂತೆ ತಂತ್ರಾಂಶದಲ್ಲಿ ಸ್ವಯಂ ಚಾಲಿತ ಮ್ಯುಟೇಷನ್ ಅನಮೋದನೆಯಾಗುವುದನ್ನು ಮಾರ್ಪಾಡು ಮಾಡಿರುವುದನ್ನು ಕಂದಾಯ ಸಚಿವರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯದಾದ್ಯಂತ ಜಾರಿಗೆ ಬರುವಂತೆ ಚಾಲನೆ ನೀಡಿರುತ್ತಾರೆ.

ನೋಟೀಸು ರಹಿತ 9 ರೀತಿಯ ಮ್ಯುಟೇಷನ್ಗಳು ಸ್ವಯಂ ಚಾಲಿತವಾಗಿ ಅನುಮೋದನೆಯಾಗುವುದನ್ನು ಏಪ್ರಿಲ್ 2024 ರಿಂದಲೇ ಜಾರಿಗೆ ತರಲಾಗುತ್ತದೆ. ಆದರೆ 7 ದಿನಗಳ ಹಾಗೂ 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಷನ್ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ಸಂಬಂಧಪಟ್ಟ ರಾಜಸ್ವ ನಿರೀಕ್ಷಕರು ಖುದ್ದಾಗಿ ಡಿಜಿಟಲ್ ಸಹಿ ಮೂಲಕ ಅನುಮೋನೆ ನೀಡುವ ಪದ್ದತಿ ಮುಂದುವರೆದಿತ್ತು.

ಇದರಿಂದ ಮ್ಯುಟೇಷನ್ ಅನುಮೋದನೆಗೆ ಹೆಚ್ಚಿನ ಸಮಯ ತಗಲುತ್ತಿದ್ದುದರಿಂದ ಹಕ್ಕು ಬದಲಾವಣೆ ಪ್ರಕರಣಗಳು ಅನುಮೋದನೆ ವಿಳಂಬವಾಗುತ್ತಿತ್ತು ಈ ವಿಳಂಬವನ್ನು ತಪ್ಪಿಸಲು ಹೊಸ ಪದ್ಧತಿಯನ್ನು ಇಂದಿನಿಂದ ಜಾರಿಗೆ ತಂದಿದ್ದು ಈ ಹೊಸ ವದ್ಯತಿಯಲ್ಲಿ 7 ದಿನಗಳ ನೋಟೀಸ್ ಅವಧಿಯ ಹಾಗೂ 15 ದಿನಗಳ ನೋಟೀಸ್ ಅವಧಿಯ ಎಲ್ಲಾ ರೀತಿಯ ಹಕ್ಕು ಬದಲಾವಣೆಯ ಮುಟೇಷನ್ಗಳನ್ನು ನೋಟಿಸ್ ಅವಧಿಯು ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಯಾವುದೇ ಮಾನವ ಹಸ್ತಕ್ಷೇಪವಿಲ್ಲದ ಸರ್ವರ್ ಸಹಿ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿರುತ್ತದೆ.

7 ಕೆಲಸ ದಿನಗಳು ಅಥವಾ 15 ಕೆಲಸದ ದಿನಗಳ ನೋಟೀಸ್ ಅವಧಿಯೊಳಗೆ ರಾಜಸ್ಮ ನಿರೀಕ್ಷಕರು(ಖ1) ಸರ್ಕಾರಿ ಆಕ್ಷೇಪ) ಅಥವಾ ಸಾರ್ವಜನಿಕರು ಯಾವುದೇ ತಕರಾರು ನೀಡಿದಲ್ಲಿ ಸದರಿ ಮ್ಯುಟೇಷನ್ ಅನ್ನು ಪೂರ್ಣಗೊಳಿಸದೆ ಆರ್.ಸಿ.ಎಂ.ಎಸ್ ತಂತ್ರಾಂಶದ ಮೂಲಕ ತಹಶೀಲ್ದಾರ್ ನ್ಯಾಯಾಲಯಕ್ಕೆ ಸದರಿ ಪ್ರಕರಣವನ್ನು ವರ್ಗಾಯಿಸಲಾಗುತ್ತದೆ ತಹಶೀಲ್ದಾರ್ ರವರು ವಿಚಾರಣೆ ನಡೆಸಿ ಆದೇಶ ಹೊರಡಿಸುವರು.

ಈ ರೀತಿಯ ತಂತ್ರಾಂಶದಲ್ಲಿ ಹೊಸದಾಗಿ ಮಾರ್ಪಾಡು ಮಾಡಿರುವುದರಿಂದ ಜಮೀನಿನ ಹಕ್ಕು ಬದಲಾವಣೆಯು ಯಾವುದೇ ರೀತಿಯ ವಿಳಂಬಕ್ಕೆ ಅನುಕೂಲವಾಗುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande