ಕಾರಟಗಿ : ಚೈನ್ ಕಳ್ಳನ ಬಂಧನ
ಕಾರಟಗಿ, 18 ಫೆಬ್ರವರಿ (ಹಿ.ಸ.) : ಆ್ಯಂಕರ್ : ವಿಳಾಸವನ್ನು ಕೇಳವ ನೆಪದಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯನ್ನು ಮಾತನಾಡಿಸುತ್ತಾ ಆಕೆಯ ಕೊರಳಲಿದ್ದ ಎರೆಡು ತೊಲೆ ಬಂಗಾರದ ಚೈನ್ ಅನ್ನು ಕದ್ದು ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು 24 ತಾಸುಗಳಲ್ಲಿ ಚೈನ್ ಸಮೇತ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್
ಕಾರಟಗಿ : ಚೈನ್ ಕಳ್ಳನ ಬಂಧನ


ಕಾರಟಗಿ, 18 ಫೆಬ್ರವರಿ (ಹಿ.ಸ.) :

ಆ್ಯಂಕರ್ : ವಿಳಾಸವನ್ನು ಕೇಳವ ನೆಪದಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯನ್ನು ಮಾತನಾಡಿಸುತ್ತಾ ಆಕೆಯ ಕೊರಳಲಿದ್ದ ಎರೆಡು ತೊಲೆ ಬಂಗಾರದ ಚೈನ್ ಅನ್ನು ಕದ್ದು ಪರಾರಿ ಆಗಿದ್ದ ಆರೋಪಿಯನ್ನು ಪೊಲೀಸರು 24 ತಾಸುಗಳಲ್ಲಿ ಚೈನ್ ಸಮೇತ ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯು ಕನಕಗಿರಿಯ ಈಚನಾಳ ಗ್ರಾಮ ನಿವಾಸಿ ಹನುಮೇಶ (26) ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಮತಿ ಗಂಗಾ ಅವರು ಕಾರಟಗಿ ಬಸ್ ನಿಲ್ದಾಣದಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಗುಂಡಪ್ಪ ಲೇಔಟ್ ಸಮೀಪದಲ್ಲಿ ಆರೋಪಿಯು ವಿಳಾಸ ಕೇಳುವ ನೆಪದಲ್ಲಿ, ಅವರ ಕತ್ತಿನಲ್ಲಿದ್ದ ಎರೆಡು ತೊಲೆ ಬಂಗಾರದ ಚೈನ್ ಅನ್ನು ಕದ್ದು ಪರಾರಿ ಆಗಿದ್ದನು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನಂತರ, ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande