
ಬಳ್ಳಾರಿ, 06 ನವೆಂಬರ್ (ಹಿ.ಸ.)
ಕರ್ತವ್ಯಕ್ಕೆ ಸತತ ಗೈರುಹಾಜರಾಗಿ ಕರ್ತವ್ಯ ಲೋಪ ಎಸಗಿದ ಸಂಡೂರು ತಾಲ್ಲೂಕಿನ ಇಬ್ಬರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು (ವಿ.ಆರ್.ಡಬ್ಲ್ಯೂ) ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ.
ಸುಶೀಲ ನಗರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಾನಗರದ
ನಿವಾಸಿ ತಿಮ್ಮಪ್ಪ ಕೆ. (ತಂದೆ: ಹನುಮಂತಪ್ಪ) ಮತ್ತು ಬಂಡ್ರಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೋಡಿ ಕಸನಾಯಕನಹಳ್ಳಿ ಗ್ರಾಮ ನಿವಾಸಿ ಎಂ. ಅಂಜಿನಪ್ಪ (ತಂದೆ: ಮಲಿಯಪ್ಪ) ಅವರು ವಜಾಗೊಂಡವರು.
ಈ ಇಬ್ಬರು ಕಾರ್ಯಕರ್ತರು ಕರ್ತವ್ಯಕ್ಕೆ ನಿರಂತರವಾಗಿ ಗೈರುಹಾಜರಾಗಿದ್ದರು. ಈ ಸಂಬಂಧ ಇಲಾಖೆಯಿಂದ ಮೂರು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ಅದಕ್ಕೆ ಯಾವುದೇ ಸಮಂಜಸ ಉತ್ತರ ನೀಡಿರಲಿಲ್ಲ ಎಂದು ಹೇಳಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್