



ಬಳ್ಳಾರಿ, 06 ನವೆಂಬರ್ (ಹಿ.ಸ.)
ಸಮಗ್ರ ಪೆÇೀಷಕಾಂಶ ನಿರ್ವಹಣೆ, ಮಣ್ಣಿನ ಫಲವತ್ತತೆ ರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಜಾಗೃತಿಗಾಗಿ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಸ್ಥೆಯ ಬಳ್ಳಾರಿ ಸಂಶೋಧನಾ ಕೇಂದ್ರವು ತುಮಟಿ ಗ್ರಾಮದಲ್ಲಿ ಶುಕ್ರವಾರ ‘ಕ್ಷೇತ್ರ ಬಚಾವೋ ಅಭಿಯಾನ’ವನ್ನು ಏರ್ಪಡಿಸಿತ್ತು.
ಸಂಸ್ಥೆಯ ಹಿರಿಯ ಕೃಷಿ ಅರ್ಥಶಾಸ್ತ್ರ ವಿಜ್ಞಾನಿ ಡಾ. ರವಿ ದುಪ್ದಲ್ ಅವರು, ಪರಿಸರಸ್ನೇಹಿ ಕೃಷಿ, ಬೆಳೆ ವೈವಿಧ್ಯೀಕರಣ ಹಾಗೂ ಪೆÇೀಷಕಾಂಶಗಳ ಸಮರ್ಪಕ ಚಕ್ರ ನಿರ್ವಹಣೆಯು ಮಳೆಯಾಶ್ರಿತ ಕೃಷಿಯ ಸುಸ್ಥಿರತೆಗೆ ಅನಿವಾರ್ಯ. ರೈತರು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪಿಎಂ-ಕಿಸಾನ್, ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮುಂತಾದ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಣ್ಣು ವಿಜ್ಞಾನಿ ಡಾ. ಕವಿತಾ ಪಿ. ಜಾಧವ್ ಅವರು ಸಮಗ್ರ ಪೆÇೀಷಕಾಂಶ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ನೀಡಿ, ರೈಜೋಬಿಯಂ, ಅಜೋಸ್ಪಿರಿಲ್ಲಂ, ಟ್ರೈಕೋಡರ್ಮಾ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯಾಗಳಂತಹ ಜೈವಿಕ ಪರಿಕರಗಳು ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಿ, ಪೆÇೀಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.
ರೈತರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ತಮ್ಮ ಬೆಳೆ, ಪೆÇೀಷಕಾಂಶ ನಿರ್ವಹಣೆ ಹಾಗೂ ಮಣ್ಣು-ನೀರು ಸಂರಕ್ಷಣೆಗೆ ಸಂಬಂಧಿಸಿದ ಸಂದೇಹಗಳನ್ನು ಪರಿಹರಿಸಿಕೊಂಡರು. ಗ್ರಾಮದ ರೈತರು ಹಾಗೂ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್